ಕಕ್ಯಪದವು ಎಲ್.ಸಿ.ಆರ್ ಇಂಡಿಯನ್ ಶಿಕ್ಷಣ ಸಂಸ್ಥೆಯ ವತಿಯಿಂದ ಎಲ್.ಸಿ.ಆರ್ ಇಂಡಿಯನ್ ಪದವಿ ಪೂರ್ವ ಕಾಲೇಜು, ಆದರ್ಶ ಕಾಲೇಜು, ಎಲ್.ಸಿ.ಆರ್ ಇಂಡಿಯನ್ ಪ್ರಾರ್ಥಮಿಕ ವಿಭಾಗ, ಪದವಿ ಪೂರ್ವ ವಿಭಾಗದ ರಾಷ್ಟೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ಜರುಗಿತು.
ಸ್ಥಳೀಯ ಪ್ರಗತಿಪರ ಕೃಷಿಕ ವಿಠಲ್ ಭಂಡಾರಿ ಪುಣ್ಕೆದಡಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ತುಳು ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ, ಆಟಿ ತಿಂಗಳಿನ ವಿವಿಧ ಬಗೆಯ ತಿನಸು, ಗಿಡಮೂಲಿಕೆಗಳು, ಹಳೆಯ ಕಾಲದ ಕೃಷಿ ಮತ್ತು ಮನೆ ಸಾಮಗ್ರಿಗಳಾದ ಮರದ, ಮಣ್ಣಿನ, ಪಾತ್ರೆಗಳು ಹಾಗೂ ಹಳೆಯ ನಾಣ್ಯಗಳನ್ನು ಪ್ರದರ್ಶಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲ ಪ್ರವೀಣ್. ಎ, ಮುಖ್ಯ ಶಿಕ್ಷಕಿ ನಿಶಾ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ತರಾದ ಶಿವರಾಜ್ ಗಟ್ಟಿ, ಕಲಾ ವಿಭಾಗದ ಮುಖ್ಯಸ್ಥೆ ವಿಂದ್ಯಾಶ್ರೀ, ಉಪಸ್ಥಿತರಿದ್ದರು. ರಾಷ್ಟೀಯ ಸೇವಾ ಯೋಜನಾ ಘಟಕದ ನಾಯಕ ಮಿಥುನ್ ಕುಮಾರ್ ಹಾಗೂ ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು.