ಬಂಟ್ವಾಳ

ಕಾರಾಜೆ ಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ

ಕಾರಾಜೆ ಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ

ಸಜೀಪ ಮೂಡ  ಗ್ರಾಮದ ಕಾರಾಜೆಯಾ ನೂರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ, ದಾರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ  ಪಡ್ಪು , ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕಾರಾಜೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾರಾಜೆಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಜಾಹೀರಾತು

ನೂರುಲ್ ಹುದಾ ಜುಮಾ ಮಸ್ಜಿದ್  ಕಾರಾಜೆ :

ಮಸೀದಿಯ ಖತೀಬರಾದ ಯೂಸುಫ್ ಮದನಿ ನೇತೃತ್ವದಲ್ಲಿ ಮಸೀದಿಯ ವಠಾರದಲ್ಲಿ ಅಧ್ಯಕ್ಷರಾದ ಜನಾಬ್ . ಶೇಖಬ್ಬ ಹಾಜಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.

ನಂತರ ಮಾತನಾಡಿದ ಖತೀಬರಾದ ಯೂಸುಫ್ ಮದನಿ ಯವರು ದೇಶಪ್ರೇಮವು ಈಮಾನಿನ ಭಾಗವಾಗಿದೆ ಮತ್ತು ಸ್ವತಂತ್ರ ಹೋರಾಟಗಾರನ್ನು ಸ್ಮರಿಸಿದರು .

ಕಾರ್ಯಕ್ರಮದಲ್ಲಿ  ಇಬ್ರಾಹಿಂ(ಉಪಾಧ್ಯಕ್ಷರು, ನೂರುಲ್ ಹುದಾ ಜುಮಾ ಮಸ್ಜಿದ್  ಕಾರಾಜೆ  ಕಾರಾಜೆ), ಅನ್ಸಾರ್ ಕಾರಾಜೆ (ಅಧ್ಯಕ್ಸರು ,ಹಯಾತುಲ್ ಇಸ್ಲಾಂ ಯಾಂಗ್ ಮೆನ್ಸ್ ಕಾರಾಜೆ ), ಸದರ್ ಮುಹಲ್ಲಿಂ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು. ಅಬ್ದುಲ್ ಲತೀಫ್ ಹಾಜಿ (ಪ್ರದಾನ ಕಾರ್ಯದರ್ಶಿ ,ನೂರುಲ್ ಹುದಾ ಜುಮಾ ಮಸ್ಜಿದ್  ಕಾರಾಜೆ) ಕಾರ್ಯಕ್ರಮವನ್ನು ನೀರೂಪಿಸಿದರು .

ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕಾರಾಜೆ

ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕಾರಾಜೆ ಯೂನಿಟ್ ವತಿಯಿಂದ ಕಾರಾಜೆ ಜಂಕ್ಷನ್ ಬಳಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಧ್ವಜಾರೋಹಣ ನೆರವೇರಿಸಿ ಅಬ್ದುಲ್ ಮುಬಾರಕ್ ಕಾರಾಜೆ (ಕಾರ್ಯಕಾರಿ ಸಮಿತಿ ಸದಸ್ಯ ,ಪ್ರವಾಸಿ ಕಾರಾಜೆ) ಎಲ್ಲಾ ಸಂಧಿಗ್ನತೆ ಗಳನ್ನು, ಪ್ಯಾಶಿಸ್ಟ್ ಮನೋಸ್ಥಿತಿಯ ಎಲ್ಲ ರಿತೀಯ ಷಡ್ಯಂತ್ರಗಳನ್ನೂ ಮೆಟ್ಟಿ ನಿಂತು ಅಶಾಂತಿಯ ಮೂಲ ಬೇರಿಗೆ ಕೊಡಲಿಯೇಟು ಕೊಡುವಂತಹ ನಮ್ಮ ಸುಂದರ ಭಾರತ ದೇಶದಲ್ಲಿ ಶಾಂತಿಯನ್ನು ಭದ್ರವಾಗಿ ನೆಲೆ ನಿಲ್ಲಿಸಲು ಕೆಚ್ಚದೆಯಿಂದ ಹೋರಾಡುವ ಹೋರಾಟಗಾರರ ಮನೋಬಲದೊಂದಿಗೆ ಸ್ವಾತಂತ್ರವನ್ನು ಕಾಯುವ ಕಾವಲಾಳುಗಳು ಆಗಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ  ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕಾರಾಜೆ ಯೂನಿಟ್  ಅಧ್ಯಕ್ಷ ಸಿರಾಜ್ ಕಾರಾಜೆ ಮತ್ತು ಮಹಮ್ಮೆದ್ ಕಾರಾಜೆ ( ಸಜೀಪ ಮೂಡ ಗ್ರಾಮ ಸಮಿತಿ ಸದಸ್ಯ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಓಫ್ ಇಂಡಿಯಾ)  ಉಪಸ್ಥಿತರಿದ್ದರು.

 ದಾರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ ಪಡ್ಪು

ದಾರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ ಪಡ್ಪುಇದರ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಏನ್. ಕೆ. ಮೊಹಮ್ಮದ್ ಮುಸ್ಲಿಯಾರ್ (ಮಾಜಿ.ಖತೀಬರು) ರವರು ಮಸೀದಿ ವಠಾರದಲ್ಲಿ ನೆರವೇರಿಸಿದರು.ಮಸೀದಿಯ ಖತೀಬರಾದ ಝುಬೈರ್ ಅಝಅರಿ ದುಃಅ ದೊಂದಿಗೆ ಮಾತನಾಡಿ ಸ್ವಾತಂತ್ರಾ ಹೋರಾಟಗಾರನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಪಿ.ಕೆ. ಅಬ್ದುಲ್ ಕಾದರ್ ಹಾಜಿ , ಸಯ್ಯದ್ ಅಲಿ ಮುಸ್ಲಿಯಾರ್ , ಮಹಮ್ಮೆದ್ ಕಾರಾಜೆ ( ಸಜೀಪ ಮೂಡ ಗ್ರಾಮ ಸಮಿತಿ ಸದಸ್ಯ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಓಫ್ ಇಂಡಿಯಾ), ಶಂಸುಲ್ ಉಲಮಾ ಕ್ರಿಯಾ ಸಮಿತಿ ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts