71ನೇ ಸ್ವಾತಂತ್ರ್ಯೋತ್ಸವದ ಆಚರಣೆ ಅಂಗವಾಗಿ ಪ್ರಭಾತ್ ಪೇರಿ ಕಾರ್ಯಕ್ರಮವು ಬಂಟ್ವಾಳ ಕ್ಷೇತ್ರ ಬಿಜೆಪಿ ನೇತೃತ್ವದಲ್ಲಿ ನಡೆಯಿತು.
ಬಂಟ್ವಾಳ ಪೇಟೆಯ ರಾಮನಗರದಿಂದ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವರೆಗೆ ರಾಷ್ಟ್ರಧ್ವಜ ಹಿಡಿದು ಮೆರವಣಿಗೆಯಲ್ಲಿ ಬಂದು ಜನಗಣಮನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರಾದ ಯು.ರಾಜೇಶ್ ನಾಕ್, ಕ್ಷೇತ್ರ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಪ್ರಮುಖರಾದ ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರ್, ಕೃಷ್ಣಪ್ಪ ಪೂಜಾರಿ, ದಿನೇಶ್ ಭಂಡಾರಿ, ಎ.ಗೋವಿಂದ ಪ್ರಭು, ಪ್ರಮೋದ್ ಭಟ್, ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ, ಗುರುದತ್ತ್ ನಾಯಕ್, ಉಮೇಶ್ ಅರಳ, ಮಹಾಬಲ ಶೆಟ್ಟಿ, ರೋನಾಲ್ಡ್ ಡಿ’ಸೋಜಾ, ಚರಣ್ ಕುಮಾರ್, ಮಹೇಶ್ ತಲಪಾಡಿ,ಬಾಸ್ಕರ್ ಟೈಲರ್, ಡಾ.ಬಾಲಕೃಷ್ಣ, ಲಕ್ಷ್ಮಣ್ ಕುಲಾಲ್, ವಜ್ರನಾಥ್, ಜನಾರ್ಧನ್ ಬೊಂಡಾಲ , ಮನೋಜ್ ಕಳ್ಳಿಗೆ, ಪೇಮ್ ನಾಥ್, ಪುಷ್ಪರಾಜ್ ಜಕ್ರಿಬೆಟ್ಟು ಮುಂತಾದ ಪ್ರಮುಖರು ಉಪಸ್ಥಿತರಿದ್ದರು.