ಪ್ರಕೃತಿಯನ್ನು ದೇವಸ್ವರೂಪಿಯಲ್ಲಿ ಆರಾಧನೆ ಮಾಡಿಕೊಂಡು ಬಂದರಾಷ್ಟ್ರ ನಮ್ಮದು. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಸೃಷ್ಟಿ ಸ್ಥಿತಿ, ಲಯಗಳಿಗೆ ಕಾರಣವಾದ ಈ ಪ್ರಕೃತಿಯನ್ನು ಉಳಿಸಲು ನಾವೆಲ್ಲ ಪಣತೊಡಬೇಕು ಎಂದು ಯಕ್ಷಗಾನ ಕಲಾವಿದ ಅಪ್ಪಕುಂಞಿ ಮಿಂಚಿಪದವು ಹೇಳಿದರು.
ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೋಟಿವೃಕ್ಷ ಅಭಿಯಾನದ ಪರವಾಗಿ ವಿದ್ಯಾರ್ಥಿಗಳಿಗೆ ಗಿಡ ವಿತರಿಸಿ ಗಿಡಗಳನ್ನು ಉಳಿಸುವ ಬಗ್ಗೆ ಪ್ರತಿಜ್ಞೆ ವಿಧಿ ನೆರವೇರಿಸಲಾಯಿತು.ಅಧ್ಯಕ್ಷತೆಯನ್ನು ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಪ್ರಭು ವಹಿಸಿದ್ದರು. ಅತಿಥಿಗಳಾಗಿ ಪ್ರಗತಿಪರ ಕೃಷಿಕ ಶಿವರಾಮ ರೈ ಮೇರಾವು, ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ಎನ್ ಉಪಸ್ಥಿತರಿದ್ದರು.
ರಕ್ಷಾ ನಿರೂಪಿಸಿದರು. ಸಮೀಕ್ಷಾ ಸ್ವಾಗತಿಸಿದರು. ಅಕ್ಷಯಾ ವಂದಿಸಿದರು.