ಬಂಟ್ವಾಳ

ವಿಹಿಂಪ, ಬಜರಂಗದಳದಿಂದ ವಾಹನ ಜಾಥ

ವಿಶ್ವ ಹಿಂದೂ ಪರಿಷತ್ , ಬಜರಂಗದಳ ಬಂಟ್ವಾಳ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ಬಿಸಿರೋಡು ರಕ್ತೇಶ್ವರೀ ದೇವಸ್ಥಾನದ ವಠಾರದಿಂದ ಪನೋಲಿಬೈಲು ಕಲ್ಲುರ್ಟಿ ದೈವಸ್ಥಾನದವರೆಗೆ ದ್ವಿಚಕ್ರ ವಾಹನ ಜಾಥ ನಡೆಯಿತು.

ಜಾಹೀರಾತು

ಬಿಸಿರೋಡು ರಕ್ತೇಶ್ವರೀ ದೇವಸ್ಥಾನದ ವಠಾರದಲ್ಲಿ ಜಾಥವನ್ನು ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದ ಅಚಾರ ವಿಚಾರಗಳ ಬದಲಾವಣೆಯ ಕಾಲಗಟ್ಟದಲ್ಲಿ ಯುವಕರ ಚಿಂತನೆ ಕೂಡಾ ಬದಲಾಗುತ್ತಿದೆ, ದೇಶವನ್ನು ಬಲಿಷ್ಠಗೊಳಿಸುವಲ್ಲಿ ಯುವಕರ ಪಾತ್ರ ಹಿರಿದು ಎಂದರು.

ಜಿಲ್ಲಾ ಸಂಚಾಲಕ ಬಾಸ್ಕರ ಧರ್ಮಸ್ಥಳ, ಜಿಲ್ಲಾ ಸಹ ಪ್ರಮುಖ್ ಗುರುರಾಜ್ ಬಂಟ್ವಾಳ್, ಪ್ರಮುಖರಾದ ಪ್ರಕಾಶ್ ಬೆಳ್ಳೂರು, ಸುರೇಶ್ ಬೆಂಜನಪದವು, ಜಿತೇಂದ್ರ ಕೊಟ್ಯಾನ್ ಅಜ್ಜಿಬೆಟ್ಟು, ಸಚಿನ್ ಅಮ್ಮುಂಜೆ, ಧಕ್ಷಣ್ ಸಜೀಪ ಲೋಹಿತ್ ಪನೋಲಿಬೈಲು ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts