ಬಂಟ್ವಾಳ

ಪಾಣೆಮಂಗಳೂರು ಚಾತುರ್ಮಾಸ- ರತ್ನತ್ರಯ ಆರಾಧನೆ, ಮಂಗಲ ಪ್ರವಚನ

ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಭವ್ಯ ಮಂಗಲ ವರ್ಷಾಯೋಗ – ಚಾತುರ್ಮಾಸವನ್ನು ಆಚರಿಸುತ್ತಿದ್ದಾರೆ. ಆ ಪ್ರಯುಕ್ತ ಆದಿತ್ಯವಾರ ಮುನಿಶ್ರೀಗಳ ಪಾವನ ಸಾನ್ನಿಧ್ಯದಲ್ಲಿ “ರತ್ನತ್ರಯ ಆರಾಧನೆ”ಯನ್ನು ಕಾರ್ಕಳ ಶ್ರೀ ನೇಮಿರಾಜ ಆರಿಗರವರ ನೇತೃತ್ವದ ಕರ್ನಾಟಕ ಜೈನ ಸ್ವಯಂ ಸೇವಕರ ತಂಡ ಮತ್ತು ಸ್ವಸಹಾಯ ಸಂಘಗಳು, ಇವರ ಪ್ರಾಯೋಜಕತ್ವದಲ್ಲಿ, ಲಿ ಶ್ರಾವಕ ಬಂಧುಗಳ ಭಾಗವಹಿಸುವಿಕೆಯಲ್ಲಿ ನಡೆಯಿತು.
ಪೂರ್ವಾಹ್ನ ಮುನಿ ಶ್ರೀಗಳ ಆಹಾರ ಚರ್ಯೆಯಲ್ಲಿ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.
ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಸಾಮೂಹಿಕ ರತ್ನತ್ರಯ ಆರಾಧನೆಯ ವಿಧಿ- ವಿಧಾನಗಳನ್ನು ಮತ್ತು ಪ್ರತೀ ಪೂಜೆಗಳ ಫಲಗಳನ್ನು ವಿವರವಾಗಿ ತಿಳಿಯಪಡಿಸಿದರು. ಅಪರಾಹ್ನ ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಧರ್ಮ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.
“ಬದುಕು ಹಾಗೂ ಬದುಕಲು ಬಿಡು” ಎಂದು ಸಾರಿದ ಮಹಾವೀರರ ವಾಣಿಯನ್ನು ಜೀವನದಲ್ಲಿ ಆಚರಣೆಗೆ ತಂದಲ್ಲಿ ಮೋಕ್ಷ ಮಾರ್ಗ ಸಾಧ್ಯ, ಅಲ್ಲದೇ ಎಲ್ಲಾ ಧರ್ಮಗಳು ಜೀವನದಲ್ಲಿ ಉತ್ತಮ ಬದುಕನ್ನು ಸಾಗಿಸಲು ಮಾರ್ಗದರ್ಶನ ನೀಡಿದರೆ, ಜೈನ ಧರ್ಮ ಉತ್ತಮ ಸಮಾಧಿ ಪಡೆಯಲು ಮಾರ್ಗದರ್ಶನ ನೀಡುತ್ತದೆ ಎಂದು ಮುನಿ ಶ್ರೀ ವೀರ ಸಾಗರ ಮಹಾರಾಜರು ತಮ್ಮ ಮಂಗಲ ಪ್ರವಚನದಲ್ಲಿ ತಿಳಿಸಿದರು.
ಮಂಗಲ ಪ್ರವಚನದ ನಂತರ ಧರ್ಮ ಸಭೆಯಲ್ಲಿ “ಶಂಕಾ-ಸಮಾಧಾನ”ಕಾರ್ಯಕ್ರಮ ನಡೆಯಿತು.ಅನೇಕ ಶ್ರಾವಕ ಬಂಧುಗಳ  ಧಾರ್ಮಿಕ ಪ್ರಶ್ನೆಗಳಿಗೆ ಮುನಿ ಮಹಾರಾಜರು ಉತ್ತರಿಸಿ ಶ್ರಾವಕರ ಶಂಕೆಗಳಿಗೆ ಶಾಸ್ತ್ರಗಳ ಆಧಾರಿತ ಉತ್ತರಗಳನ್ನು ಪ್ರತಿಯೊಬ್ಬರ ಮನಮುಟ್ಟುವಂತೆ ತಿಳಿಯಪಡಿಸಿದರು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಶ್ರಾವಕರೂ “ಶಂಕಾ-ಸಮಾಧಾನ”ಕಾರ್ಯಕ್ರಮದಲ್ಲಿ, ತಮ್ಮ ಪ್ರಶ್ನೆಗಳನ್ನು ಕೇಳಿ ತಮ್ಮ ಉತ್ತರ ಪಡೆದು, ಧರ್ಮದ ಅರಿವು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ಸಾಮೂಹಿಕ ಆರಾಧನೆ ಕಾರ್ಯಕ್ರಮದಲ್ಲಿ ಮಂಗಳೂರು, ಮೂಡುಬಿದಿರೆ,ವೇಣೂರು, ಧರ್ಮಸ್ಥಳ, ಕಾರ್ಕಳ, ಹಾಸನ ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.
ದಿನಾಂಕ 15.ಮಂಗಳವಾರ, ಉಡುಪಿ ಜೈನ್ ಮಿಲನ್ ಮತ್ತು ಉಡುಪಿಯ ಸಮಸ್ತ ಜೈನ ಸಮಾಜ ಬಾಂಧವರ ಪ್ರಾಯೋಜಕತ್ವದಲ್ಲಿ ಸಾಮೂಹಿಕ “ಕಲ್ಯಾಣ ಮಂದಿರ ಆರಾಧನೆ “ ನಡೆಯಲಿದೆ. ಈ ಆರಾಧನೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಬಂಧುಗಳು ಭಾಗವಹಿಸಿ ಪುಣ್ಯಭಾಗಿಗಳಾಗಬೇಕೆಂದು ಸಮಿತಿಯ ಕಾರ್ಯಾಧ್ಯಕ್ಷ  ಸುದರ್ಶನ್ ಜೈನ್ ವಿನಂತಿಸಿದರು.
ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು,  ಸುದರ್ಶನ್ ಜೈನ್,  ಸಂಪತ್ ಕುಮಾರ್ ಶೆಟ್ಟಿ,  ಧರಣೇಂದ್ರ ಇಂದ್ರ,  ಸುಭಾಶ್ಚಂದ್ರ ಜೈನ್,  ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್,  ದೀಪಕ್ ಇಂದ್ರ,  ಕೆ. ಪ್ರವೀಣ್ ಕುಮಾರ್,  ಆದಿರಾಜ್ ಜೈನ್,  ಭರತ್ ರಾಜ್ ಮುಂತಾದವರು ಉಪಸ್ಥಿತರಿದ್ದರು.

 

 

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.