ನೇತ್ರಾವತಿಯಿಂದ ನದಿ ನೀರನ್ನು ಕುಡಿಯುವ ಉದ್ದೇಶದಿಂದ ಬೆಂಗಳೂರಿಗೆ ಕೊಂಡು ಹೋಗಲು ಪ್ರಯತ್ನಿಸಿಸರುವ ಸರಕಾರದ ಚಿಂತನೆಯ ಬಗ್ಗೆ ತುಂಬೆ ವೆಂಟೆಡ್ ಡ್ಯಾಂ ಹೋರಾಟ ಸಮಿತಿ ವಿರೋದ ವ್ಯಕ್ತಪಡಿಸಿದೆ.
ನೇತ್ರಾವತಿ ನದಿ ತಿರುವು ಯೋಜನೆಯನ್ನು ಪರೋಕ್ಷವಾಗಿ ನೇತ್ರಾವತಿಯಿಂದ ನದಿಯಿಂದ ಬೆಂಗಳುರಿಗೆ ನೀರು ಎಂಬ ಯೋಜನೆ ಸದ್ದಿಲ್ಲದೆ ಜಾರಿಯಾಗುವ ಬಗ್ಗೆ ಈಗಾಗಲೇ ಸರಕಾರದ ಮಟ್ಟದಲ್ಲಿ ಸಿದ್ದತೆಗಳು ನಡೆದಿವೆ. ಆದರೆ ಈ ಯೋಜನೆಯ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು , ಜನಪ್ರತಿನಿಧಿಗಳು ಬೆಂಗಳುರಿನಲ್ಲಿ ಕುಳಿತು ಚರ್ಚೆ ಮಾಡುವುದು ಸರಿಯಲ್ಲ. ಇಲ್ಲಿನ ಸ್ಥಳಿಯ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅದರ ಸಾಧಕ ಬಾಧಕಗಳ ಬಗ್ಗೆ ಸವಿವರ ನೀಡಬೇಕು, ಒಂದು ವೇಳೆ ಯಾವುದೇ ಮಾಹಿತಿಯನ್ನು ನೀಡದೆ ಸ್ಥಳೀಯರನ್ನು ದೂರವಿಟ್ಟು ಯೋಜನೆ ಅನುಷ್ಟಾ ಮಾಡಲು ಹೊರಟರೆ ತುಂಬೆ ಡ್ಯಾಂ ನಿರ್ಮಾಣದ ಅವಾಂತರ ಪುನಾರಾವರ್ತನೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಂಬೆ ಡ್ಯಾಂನಲ್ಲಿ ಜನರಿಗೆ ಆದ ಅನ್ಯಾಯ ಮತ್ತೆ ಪುನರಾವರ್ತನೆ ಆಗಬಾರದು. ತುಂಬೆ ಡ್ಯಾಂ ಸಂತ್ರಸ್ತರ ಸಮಕ್ಷಮ ಮುಳುಗಡೆ ಭೂಮಿಯ ಪಾರದರ್ಶಕ ಸರ್ವೆ ಮಾಡಿ ನ್ಯಾಯೋಚಿತ ಸೂಕ್ತ ಪರಿಹಾರ ನೀಡಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯ ೨೦೧೭ ರ ಜನವರಿಯಲ್ಲಿ ಸರಕಾರಕ್ಕೆ ಸ್ಪಷ್ಟವಾದ ಆದೇಶ ನೀಡಿದ್ದರೂ ಕೂಡಾ ೧೪ ವರ್ಷದ ರೈತರ ಜ್ವಲಂತ ಸಮಸ್ಯೆಗೆ ಸರಕಾರ ಸರಿಯಾಗಿ ಸ್ಪಂದಿಸಿದೆ ತಾರತಮ್ಯ ಮಾಡಿದೆ ಕೇವಲ ಕೃಷಿಯ ಫಲವತ್ತಾದ ಭೂಮಿಗೆ ನೆಲ ಬಾಡಿಗೆ ಮಾತ್ರನೀಡುವ ಮೂಲಕ ರೈತನನ್ನು ಮತ್ತಷ್ಟು ಕೀಳು ಮಟ್ಟದಲ್ಲಿ ಕಂಡಿದೆ ಎಂದು ದೂರಿದೆ. ಅ ನಂತರ ಈವರಗೆ ಶಾಶ್ವತವಾದ ಭೂ ಪರಿಹಾರವನ್ನು ನೀಡಲು ಸರಕಾರ ಮುಂದಾಗಿಲ್ಲ , ಈಗೀರುವಾಗ ಬೆಂಗಳುರಿಗೆ ೪೦ಟಿಎಂ.ಸಿ ನೀರು ಅಗತ್ಯವಿದ್ದು ಇದಕ್ಕಾಗಿ ಮತ್ತೆ ದೊಡ್ಡ ಡ್ಯಾಂ ನಿರ್ಮಾಣವಾಗಬೇಕಿದ್ದು ಮತ್ತೆ ಅನೇಕ ರೈತರ ಫಲವತ್ತಾದ ಕೃಷಿ ಭೂಮಿ ಜಲಾವೃತಗೊಳ್ಳಲಿದೆ. ಇದರಿಂದಾಗಿ ಭೂಮಾಲಿಕರು ಮತ್ತೆ ಸಂಕಷ್ಟಕ್ಕೆಗೊಳಗಾಗಲಿದ್ದು ಸರಕಾರ ಪರಿಹಾರ ನೀಡದೆ ಕತ್ತಲಲ್ಲಿಡುತ್ತದೆ , ಪ್ರಸ್ತುತ ಮಂಗಳೂರಿಗೆ ಕುಡಿಯುವ ನೀರು ಪೂರೈಸಲು ಸಾಕಷ್ಟು ಹಣವಿಲ್ಲದೆ ರೈತರ ಪರಿಹಾರ ನೆನೆಗುದಿಗೆ ಬಿದ್ದಿದೆ. ಇನ್ನು ಮಂಗಳುರಿನಿಂದ ಬೆಂಗಳೂರಿಗೆ ನೀರು ಪೂರೈಸಲು ಹೋಗಿ ಅದೆಷ್ಟೋ ರೈತರ ಭೂಮಿ ಕಸಿದುಕೊಂಡು ರೈತರಿಗೆ ಪರಿಹಾರ ನೀಡದೆ ಅತನ ಜೀವನದಲಲಿ ಚೆಲ್ಲಾಟವಾಡುವುದು ಸರಿಯಲ್ಲ, ಭೂಪರಿಹಾರಕ್ಕೆ ಅನುದಾನವಿಟ್ಟು ಬಳಿಕ ಯೋಜನೆಯನ್ನು ಜಾರಿ ಮಾಡಿ ಎಂದು ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್, ಕಾರ್‍ಯದರ್ಶಿ ಇದಿನಬ್ಬ, ಕರ್ನಾಟಕ ರೈತ ಸಂಘ ಹಸಿರು ಸೇನೆಜಿಲ್ಲಾ ಕಾರ್‍ಯದರ್ಶಿ ಮನೋಹರ ಶೆಟ್ಟಿ, ತಾಲೂಕು ಅಧ್ಯಕ್ಷ ಶರತ್ ಶೆಟ್ಟಿ, ಕಾರ್‍ಯದರ್ಶಿ ಸುದೇಶ್ ಮಯ್ಯ ಸಂಯುಕ್ತವಾಗಿ ಆಗ್ರಹಿಸಿದ್ದಾರೆ.