ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಅನುದಾನ ಸ್ಥಗಿತಗೊಳಿಸಿದ್ದನ್ನು ಪ್ರತಿಭಟಿಸಿ ಕಲ್ಲಡ್ಕ ಶಾಲಾ ಮಕ್ಕಳು ಮತ್ತು ಪೋಷಕರು ಬಿ.ಸಿ.ರೋಡ್ ಮಿನಿ ವಿಧಾನಸೌಧ ಕಚೇರಿ ಕಟ್ಟಡ ಎದುರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭ ವಿದ್ಯಾರ್ಥಿಗಳು ಹಾಗೂ ಪೋಷಕರು ಮಾತನಾಡಿ ಸರಕಾರದ ಕ್ರಮವನ್ನು ಟೀಕಿಸಿದರು. ಖಾಲಿ ಬಟ್ಟಲುಗಳನ್ನು ಹಿಡಿದುಕೊಂಡು ಬಂದ ಮಕ್ಕಳು, ಅದನ್ನೇ ಮೇಲೆತ್ತಿ ನ್ಯಾಯ ಕೋರಿ ಘೋಷಣೆ ಕೂಗಿದರು..ತಮ್ಮ ಕಿಸೆಯ ಹಣದಿಂದ ಕೊಲ್ಲೂರು ದೇವಳ ಅನ್ನ ನೀಡುತ್ತಿಲ್ಲ,ಭಕ್ತರು ಹಾಕಿದ ಹಣದಿಂದ ಅನ್ನ ನೀಡುತ್ತಿದೆ.ರಾಜಕೀಯ ದ್ವೇಷಕ್ಕಾಗಿ ಅನುದಾನವನ್ನು ರದ್ದುಗೊಳಿಸಿ ನಮ್ಮ ಒಂದು ಹೊತ್ತಿ ತತ್ತು ಅನ್ನಕ್ಕೆ ಮಣ್ಣ ಹಾಕಿದ ನಿಮಗೆ ನಮ್ಮ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅನದಾನ ರದ್ದು ಆದೇಶವನ್ನು ಕೂಡಲೇ ವಾಪಾಸು ಪಡೆದು ಮುಕಾಂಬಿಕೆ ಅನ್ನ ಪ್ರಸಾದ ಮತ್ತೆ ಮುಂದುವರಿಯಬೇಕು ಇಲ್ಲದಿದ್ದಲ್ಲಿ ಮುಂದಿನ ವಿದ್ಯಾರ್ಥಿಶಕ್ತಿ ಎನೆಂಬುದನ್ನು ತೊಇರಿಸುತ್ತವೆ ಎಂದು ಎಚ್ಚರಿಸಿದರು.
ಎಎಸ್ಪಿ ಡಾ.ಅರುಣ್, ಎಸ್.ಐ. ರಕ್ಷಿತ್ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.
video:
read more: