ಮೇಲ್ಕಾರ್ ಸಮೀಪ ಮಾರ್ನಬೈಲ್ ನಲ್ಲಿ ಸಂಚರಿಸುತ್ತಿದ್ದ ಬೈಕಿಗೆ ಮೇಲ್ಕಾರ್ ಕಡೆಯಿಂದ ಬಂದ ರಿಕ್ಷಾವೊಂದು ಡಿಕ್ಕಿ ಹೊಡೆದು, ಮಗುಚಿಬಿದ್ದ ಪರಿಣಾಮ, ರಿಕ್ಷಾದಲ್ಲಿದ್ದ ಮಹಿಳೆಯೋರ್ವರು ಮೃತಪಟ್ಟು ಆರು ಮಂದಿ ಗಾಯಗೊಂಡಿದ್ದಾರೆ.
ಸಜಿಪ ನಿವಾಸಿ ರುಖ್ಯಾ (32) ಮೃತಪಟ್ಟವರು. ರಿಕ್ಷಾದಲ್ಲಿ ಪಯಣಿಸುತ್ತಿದ್ದ ಅಬ್ದುಲ್ ಹಕೀಂ, ಪದ್ಮಾವತಿ, ರಿಝ್ವಾನ್, ಸಂಶೀರ ಹಾಗೂ ಬೈಕ್ ಸವಾರ ಮಹಮ್ಮದ್, ಸಹಸವಾರ ಸುನಿಲ್ ಎಂಬವರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಬಂಟ್ವಾಳ ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…