ಸ್ವಚ್ಛತೆ ಕೇವಲ ಪರಿಸರಕ್ಕೆ ಸಂಬಂತ ವಿಚಾರ ಮಾತ್ರವಲ್ಲ ತಮ್ಮನ್ನು ತಾವು ಶುಚಿಯಾಗಿ ಇಟ್ಟುಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಇದು ಯಾರೂ ಹೇಳಿ ಬರುವಂತಹುದಲ್ಲ ಎಂದು ಎಸ್ ವಿ ಎಸ್ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ತುಕಾರಾಂ ಪೂಜಾರಿ ನುಡಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಗಳ ಆಶ್ರಯದಲ್ಲಿ ಆಯೋಜಿಸಲಾದ ಸ್ವಚ್ಛತಾ ಪಕ್ವಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸ್ವಚ್ಛತೆಯ ಅಗತ್ಯ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಮನೆಯಿಂದ ಆರಂಭಗೊಂಡು ಶಾಲಾ ಕಾಲೇಜುಗಳ ಮುಖೇನ ದೇಶವ್ಯಾಪಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಅಧ್ಯಕತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ರವರು ಮಾತಾಡಿ, ಸ್ವಚ್ಛತಾ ಪಕ್ವಾರ ಒಂದು ಮಹತ್ವದ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಸ್ವಚ್ಛ ಭಾರತದ ಅಭಿಯಾನದಲ್ಲಿ ಪ್ರಾಮಾಣಿಕ ಪಾಲುದಾರರಾಗುವಂತೆ ಕರೆಯಿತ್ತರು.
ಎನ್ ಎಸ್ ಎಸ್ನ ಸಹಯೋಜನಾಕಾರಿ ಶ್ರೀ ಪ್ರದೀಪ್ ಪೂಜಾರಿ ಪ್ರತಿಜ್ಞಾ ವಿ ಬೋಸಿದರು. ಯೋಜನಾಕಾರಿ ಕಿಟ್ಟು ರಾಮಕುಂಜ ಸ್ವಾಗತಿಸಿ, ಇನ್ನೋರ್ವ ಯೋಜನಾಕಾರಿ ಡಾ. ಮಂಜುನಾಥ ಉಡುಪ ವಂದಿಸಿದರು. ವಿದ್ಯಾರ್ಥಿನಿಯರಾದ ಅಭಿಜ್ಞಾ, ಶಿವಾನಿ, ರಕ್ಷಿತಾ, ಆಶಯ ಗೀತೆಯನ್ನು ಹಾಡಿ, ಸ್ವಯಂಸೇವಕಿ ವಿದ್ಯಾಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.