ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗಾಗಿ ಸರಕಾರದಿಂದ 70.81 ಲಕ್ಷ ರೂ ಅನುದಾನ ಮಂಜೂರು ಮಾಡಲಾಗಿದೆ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಉಳಿ ಗ್ರಾಮದ ಶ್ರೀ ಬ್ರಹ್ಮಬೈದರ್ಕಳ ಜೀರ್ಣೋದ್ಧಾರ ಸಮಿತಿ ಹಾಗೂ ಬಂಟ್ವಾಳ ಶ್ರೀ ದುರ್ಗಾಮಾತಾ ದೇವಸ್ಥಾನಕ್ಕೆ ತಲಾ ರೂ.15 ಲಕ್ಷ, ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ.10 ಲಕ್ಷ, ಸುಳ್ಯ ತಾಲೂಕು ಬಸವನಮೂಲೆ ಕಲ್ಕುಂದ ಶ್ರೀ ಬಸವೇಶ್ವರ ದೇವಾಲಯ, ನರಿಕೊಂಬು ಗ್ರಾಮದ ಮಾಣಿಮಜಲು ಶ್ರೀ ನಾಲ್ಕೈತ್ತಾಯ ದೈವಸ್ಥಾನ ಹಾಗೂ ಕನ್ಯಾನ ಗ್ರಾಮದ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ತಲಾ ರೂ.5 ಲಕ್ಷ, ಬುಡೋಳಿ ಗ್ರಾಮದ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರಕ್ಕೆ 4.31ಲಕ್ಷ, ಮಂಗಳೂರು ಕಾವೂರು ಮುಲ್ಲಕಾಡು ಶ್ರೀ ಅಯ್ಯಪ್ಪ ನಾಗರೀಕ ಸೇವಾ ಸಮಿತಿ, ಬಂಟ್ವಾಳ ತಾಲೂಕು ಕೋಲ್ಪೆ ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಶ್ರೀ ದೂಮಾವತಿ ಮಲರಾಯ ದೈವಸ್ಥಾನಕ್ಕೆ ತಲಾ ೩ ಲಕ್ಷ, ನರಿಕೊಂಬು ಗ್ರಾಮದ ಪೊತಾಜೆ ಏರಮಲೆ ಶ್ರೀ ಕೋದಂಡರಾಮ ಭಜನಾ ಮಂದಿರಕ್ಕೆ 2.5 ಲಕ್ಷ ರೂ ಅನುದಾನ ಮಂಜೂರಾಗಿರುತ್ತದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.