ಜಿಲ್ಲಾ ಸುದ್ದಿ

ಸಿಕ್ಕಸಿಕ್ಕಲ್ಲಿ ಬಸ್ ನಿಲ್ಸಿದ್ರೆ ಲೈಸನ್ಸ್ ರದ್ದು – ಆರ್.ಟಿ.ಓ.

ಪ್ರಯಾಣಿಕರನ್ನು ಹತ್ತಿಸಲು ಹಾಗೂ ಇಳಿಸಲು ನಿಗದಿತ ಬಸ್‍ತಂಗುದಾಣಗಳಲ್ಲಿಯೇ ಬಸ್ಸುಗಳನ್ನು ನಿಲ್ಲಿಸಬೇಕಿದೆ.  ಎಲ್ಲೆಂದರಲ್ಲಿ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದು ಮಾಡಬಾರದು.  ಈ ರೀತಿ ಮಾಡುವುದರಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಹಾಗೂ ಅಪಘಾತಗಳು ನಡೆಯುವ ಸಂಭವವಿರುತ್ತದೆ.   ರಸ್ತೆ ಮಧ್ಯದಲ್ಲಿ ನಿಲುಗಡೆಗೊಳಿಸುವುದು ಕಂಡುಬಂದಲ್ಲಿ  ಬಸ್ಸು ಚಾಲಕರ ಡ್ರೈವಿಂಗ್ ಲೈಸನ್ಸನ್ನೇ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಬಸ್ಸಿನ ಚಾಲಕ/ನಿರ್ವಾಹಕರು ಸಮವಸ್ತ್ರವನ್ನು ತಪ್ಪದೇ ಧರಿಸಬೇಕು.  ಸುರಕ್ಷತಾ ದೃಷ್ಟಿಯಿಂದ ಪ್ರಯಾಣಿಕರು ಬಸ್ಸು ಬೇ/ ತಂಗುದಾಣದಲ್ಲಿಯೇ ಬಸ್ಸನ್ನು ಹತ್ತಬೇಕು ಹಾಗೂ ಇಳಿಯಬೇಕು. ಯಾವುದೇ ಕಾರಣಕ್ಕೂ ಚಲಿಸುತ್ತಿರುವ ಬಸ್ಸನ್ನು ಹತ್ತುವುದು ಅಥವಾ ಇಳಿಯುವುದು ಮಾಡಬಾರದಾಗಿ                               ಆರ್‍ಟಿಓ ಪ್ರಕಟಣೆ ತಿಳಿಸಿದೆ.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts