ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ೨೦೧೭–೧೮ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಗದೀಶ ಯಡಪಡಿತ್ತಾಯರ ಅಧ್ಯಕ್ಷತೆಯಲ್ಲಿ ಸಭೆ ನೆರವೇರಿತು. ಏಪ್ರಿಲ್ ೨೦೧೭ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ, ಚತುರ್ಥ, ಪಂಚಮ ಸ್ಥಾನವನ್ನು ಪಡೆದ ಐಶ್ವರ್ಯ ಕೆ.ಜೆ., ಪಲ್ಲವಿ ಡಿ. ಶೆಟ್ಟಿ ಹಾಗೂ ಮೈನಾ ಅಂಜುಮ್ ಕೆ.ಕೆ. ಅವರಿಗೆ ಚಿನ್ನದ ಪದಕವನ್ನಿತ್ತು ಸನ್ಮಾನಿಸಲಾಯಿತು.
ಪದಾಧಿಕಾರಿಗಳ ಆಯ್ಕೆ: ಶೈಕ್ಷಣಿಕ ವರ್ಷ 2017-18 ನೇ ಸಾಲಿಗೆ ನೂತನ ಅಧ್ಯಕ್ಷರನ್ನಾಗಿ ಶ್ರೀ ಶ್ರೀಧರ್ ಬಿ., ಉಪಾಧ್ಯಕ್ಷರಾಗಿ ರೂಪ ಶೆಟ್ಟಿ, ಖಜಾಂಚಿಯಾಗಿ ಶಾಹುಲ್ ಹಮೀದ್ ಹಾಗೂ ತರಗತಿ ಪ್ರತಿನಿಧಿಗಳಾಗಿ ೩೨ ಪೋಷಕರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.
ಶಾಲಾ ಸಂಚಾಲಕರಾದ ಭಾಮಿ ವಿಠಲ್ದಾಸ್ ಶೆಣೈ, ಅಡಳಿತಾಧಿಕಾರಿ ಐತಪ್ಪ ಪೂಜಾರಿ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಸೋಮನಾಥ ಭಟ್, ಗತ ವರ್ಷದ ವರದಿ ಮಂಡಿಸಿದರು. ಶಿಕ್ಷಕ ರತನ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…