ಮಂಗಳೂರಿನ ಪುರಭವನದಲ್ಲಿ ಧನ್ಯಶ್ರೀ ಪ್ರಭು ಅವರ ಭರತನಾಟ್ಯ ರಂಗಪ್ರವೇಶ ಭಾನುವಾರ ಆಗಸ್ಟ್ 6ರಂದು ನಡೆಯಲಿದೆ. ಸಂಜೆ 5.30 ಕ್ಕೆ ನಡೆಯುವ ಈ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಹಾಜರಿದ್ದು ಕಲಾವಿದೆಯನ್ನು ಹರಸಲಿದ್ದಾರೆ. ವಿದುಷಿ ವಿದ್ಯಾ ಮನೋಜ್ ಗೌರವಾರ್ಪಣೆ ನಡೆಯಲಿದೆ.
ನೇರಳೆಕೋಡಿ ಗೋಪಾಲ ಪ್ರಭುಗಳ ಪುತ್ರ ರಾಮಗಣೇಶ ಪ್ರಭು ಮತ್ತು ಶುಭಲಕ್ಷ್ಮೀ ಪ್ರಭು ಪುತ್ರಿ ಹಾಗೂ ಭರತನಾಟ್ಯ ವಿದ್ವಾನ್ ಬಿ.ದೀಪಕ್ ಕುಮಾರ್ ಶಿಷ್ಯೆ ಧನ್ಯಶ್ರೀ ಪ್ರಭು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಲ್ಲಿ ಅವರು ಅಭ್ಯಾಸ ನಡೆಸುತ್ತಿದ್ದಾರೆ. ಚಿಕ್ಕ ಪ್ರಾಯದಲ್ಲೇ ನಾಟ್ಯದತ್ತ ಆಸಕ್ತಿ ವಹಿಸಿದ ಧನ್ಯಶ್ರೀ ವಿದ್ಯಾ ಮನೋಜ್ ಅವರಲ್ಲಿ ಅಭ್ಯಾಸ ನಡೆಸಿದರು. ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿ ಆತ್ಮವಿಶ್ವಾಸ ಬೆಳೆಸಿಕೊಂಡಿರುವ ಧನ್ಯಶ್ರೀ ಸಮರ್ಥ ಕಲಾವಿದೆಯಾಗಿ ಮುನ್ನಡೆಯುವ ಲಕ್ಷಣ ತೋರಿದ್ದಾರೆ. ಯತಿರಾಜ ಆಚಾರ್ಯ ಅವರಲ್ಲಿ ಕರ್ಣಾಟಕ ಶಾಸ್ತ್ರೀಯ ಸಂಗೀತ, ಸ್ವರಾಂಜಲಿಯ ಸೈಮನ್ ಪಾಯಸ್ ಅವರಿಂದ ಗಿಟಾರ್, ಸೂರ್ಯಕಾಂತ್ ಮತ್ತು ಸತೀಶ್ ಅವರಿಂದ ಚಿತ್ರಕಲೆ ಅಭ್ಯಸಿಸಿದ್ದಾರೆ. ವಿದ್ಯಾಗಿರಿ ಎಸ್.ವಿ.ಎಸ್. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ವಳಚ್ಚಿಲ್ ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಫಾರ್ಮ ವ್ಯಾಸಂಗ ಮಾಡುತ್ತಿರುವ ಧನ್ಯಶ್ರೀ ಭರನಾಟ್ಯದ ಜ್ಯೂನಿಯರ್, ಸೀನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.