ಕಲ್ಲಡ್ಕದಲ್ಲಿರುವ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನಾಗರಪಂಚಮಿ ಪ್ರಯುಕ್ತ ಗುರುವಾರ ರಾತ್ರಿ ಪುರೋಹಿತ ನಯನಕೃಷ್ಣ ಜಾಲ್ಸೂರು ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷಾ ಬಲಿ, ತನುಪೂಜೆ ಮತ್ತು ತನುತರ್ಪಣ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ನೂರಾರು ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿ, ದೇವರ ಪ್ರಸಾದ ಪಡೆದರು. ಶ್ರೀರಾಮಚಂದ್ರಾಪುರ ಮಠದ ಅಧೀನದಲ್ಲಿರುವ ಕಲ್ಲಡ್ಕ ಗೇರುಕಟ್ಟೆ ಉಮಾಶಿವ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಡಾ. ಕಮಲಾ ಪ್ರಭಾಕರ ಭಟ್, ಮಂಗಳೂರು ಹವ್ಯಕ ಮಂಡಲದ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಪ್ರಮುಖರಾದ ಸಿ.ವಿ.ಗೋಪಾಲಕೃಷ್ಣ ಭಟ್, ಅಮೈ ಶಿವಪ್ರಸಾದ ಭಟ್, ಮಲ್ಲಿಕಾ ಜಿ.ಕೆ. ಭಟ್, ಉದಯ ಕುಮಾರ ಖಂಡಿಗ, ಸತೀಶ ಕುಮಾರ್ ಶಿವಗಿರಿ, ಯತೀನ್ ಕುಮಾರ್ ಯೇಳ್ತಿಮಾರ್, ಕೆ.ಟಿ.ಗಣೇಶ್ ಸಹಿತ ದೇವಸ್ಥಾನದ ಸೇವಾ ಸಮಿತಿ ಪ್ರಮುಖರು ಈ ಸಂದರ್ಭ ಹಾಜರಿದ್ದರು.