ಬೆಣ್ಣೆಯನ್ನು ತಿಳಿಯದವರು ಯಾರೂ ಇಲ್ಲ . ಹೆಚ್ಚಿನವರಿಗೆ ಬೆಣ್ಣೆಯಿಂದ ತುಪ್ಪ ಎಂದಷ್ಟೇ ಗೊತ್ತು. ಹಾಗೆಯೇ ಬೆಣ್ಣೆ ತಿಂದರೆ ಕಪ ಕೆಮ್ಮು ಜಾಸ್ತಿ ಆಗುತ್ತದೆ ಎಂದೇ ನಂಬಿಕೆ. ಆದರೆ ವದ್ಯಕೀಯ ಕ್ಷೇತ್ರದಲ್ಲಿ ಬೆಣ್ಣೆಯು ಅಧ್ಭುತವಾದ ಕೆಲಸವನ್ನು ಮಾಡುತ್ತದೆ.
ಬೆಂಕಿ ಸುಟ್ಟು ಗಾಯ ಆದಾಗ ಬೆಣ್ಣೆ ಹಚ್ಚಿದರೆ ಉರಿ ಹಾಗು ನೋವು ಕಡಿಮೆಯಾಗುತ್ತದೆ.
ಮೈಯಲ್ಲಿ ಕುರ ಮೂಡಿದಾಗ ಬೆಣ್ಣೆಗೆ ಸ್ವಲ್ಪ ವಿಭೂತಿ ಮಿಶ್ರ ಮಾಡಿ ಹಚ್ಚಿದರೆ ಬೇಗನೆ ಪಕ್ವವಾಗುತ್ತದೆ.
ಒಣ ಚರ್ಮದ ಮೇಲೆ ಬೆಣ್ಣೆಯನ್ನು ಹಚ್ಚಿದರೆ ಚರ್ಮ ಮೃದು ಹಾಗು ಕಾಂತಿಯುತವಾಗುತ್ತದೆ.
ಸ್ವಲ್ಪ ಬೆಣ್ಣೆಯನ್ನು ರಾತ್ರಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
ಜೀರಿಗೆ ಕಷಾಯಕ್ಕೆ ಸ್ವಲ್ಪ ಬೆಣ್ಣೆ ಹಾಕಿ ಕುಡಿದರೆ ಸೊಂಟದ ಸೆಳೆತ ಹಾಗು ನೋವು ಕಡಿಮೆಯಾಗುತ್ತದೆ.
ಬೆಣ್ಣೆಯನ್ನು ಹಚ್ಚುವುದರಿಂದ ತುಟಿ ಹಾಗು ಕಾಲಿನ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತದೆ.
ಬೆಣ್ಣೆಗೆ ಸ್ವಲ್ಪ ಅರಸಿನಪುಡಿ ಮಿಶ್ರಮಾಡಿ ಶರೀರಕ್ಕೆ ಹಚ್ಚುವುದರಿಂದ ಶರೀರದ ಕಾಂತಿ ಹೆಚ್ಚಾಗುತ್ತದೆ.
ತಿಮರೆ ರಸಕ್ಕೆ ಬೆಣ್ಣೆಯನ್ನು ಸೇರಿಸಿ ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳ ಬುದ್ಧಿಶಕ್ತಿ ಅಧಿಕವಾಗುತ್ತದೆ.
ಬಾಯಿಯಲ್ಲಿ ಹುಣ್ಣು ಆದಾಗ ಬೆಣ್ಣೆಯನ್ನು ಬಾಯಿಯ ಒಳಗೆ ಹಚ್ಚಬೇಕು.
ಬೆಣ್ಣೆಯಲ್ಲಿ ವಿಟಮಿನ್ ಎ ಅಧಿಕವಾಗಿ ಇರುವುದರಿಂದ ಕಣ್ಣಿನ ದೃಷ್ಟಿಗೆ ಉತ್ತಮವಾದುದು.
ಮಧುಮೇಹದ ರೋಗಿಗಳು ಬೆಣ್ಣೆಯನ್ನು ಪಾದ ಹಾಗು ಕಾಲಿಗೆ ಹಚ್ಚುವುದರಿಂದ ಬೆಂಕಿ ಬರುವುದು ಕಡಿಮೆಯಾಗುತ್ತದೆ.
ಬೆಣ್ಣೆಯ ನಿಯಮಿತ ಸೇವನೆಯಿಂದ ಕ್ಯಾನ್ಸರ್ ರೋಗಿಗಳ ಆರೋಗ್ಯದಲ್ಲಿ ಮಹತ್ತರ ಸುಧಾರಣೆ ಕಂಡುಬರುತ್ತದೆ.
ಬೆಣ್ಣೆಯು ಶೀಘ್ರದಲ್ಲಿ ಶಕ್ತಿನೀಡುವ ದ್ರವ್ಯವಾಗಿದ್ದು ಇದು ಶರೀರದ ಕೊಬ್ಬಿನ ಜೊತೆ ಮಿಶ್ರವಾಗುವುದಿಲ್ಲ.
ಬೆಣ್ಣೆಯ ನಿಯಮಿತ ಸೇವನೆಯು ಜೀರ್ಣಾಂಗ ವ್ಯೂಹದ ನಂಜನ್ನು ತಡೆಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ಸ್ತ್ರೀಯರಲ್ಲಿ ಗರ್ಭ ಧರಿಸುವಲ್ಲಿ ಬೆಣ್ಣೆಯು ಮಹತ್ತರ ಪಾತ್ರವಹಿಸುತ್ತದೆ.
ಬೆಣ್ಣೆಯು ಶರೀರವು ಗಟ್ಟಿಯಾಗುವುದನ್ನು (stiffness) ಮತ್ತು ಮೂಳೆಗಳಲ್ಲಿ ಕ್ಯಾಲ್ಸಿಯಂನ ಅಂಶ ಅಧಿಕವಾಗುವುದನ್ನು ತಡೆಗಟ್ಟಲು ಸಹಕರಿಸುತ್ತದೆ.
ಶರೀರಕ್ಕೆ ಅವಶ್ಯವಾದ ಲವಣ, ಖನಿಜ, ವಿಟಮಿನ್ ಗಳು ಶರೀರಕ್ಕೆ ಹೀರಿಕೊಳ್ಳಲು ಬೆಣ್ಣೆಯು ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ.
ಕೆಲವೊಂದು ಚರ್ಮ ರೋಗಗಳಲ್ಲಿ (fungal infection) ಬೆಣ್ಣೆಯು ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಬೆಣ್ಣೆ ಶರೀರದ ವ್ಯಾಧಿ ಕ್ಷಮತ್ವವನ್ನು ಹಾಗು ಮೇಧಾ ಶಕ್ತಿಯನ್ನು ಅಧಿಕಗೊಳಿಸುತ್ತದೆ.
Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.