ಬಂಟ್ವಾಳದ ಬಂಟರ ಭವನದಲ್ಲಿ ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ಪ್ರಾಕೃತಿಕ ಅನಿಲ ಖಾತೆಯ ವತಿಯಿಂದ ನಡೆದ ಉಜ್ವಲ ಯೋಜನೆಯ ಫಲಾನುಭವಿಗಳ ಸಮಾವೇಶವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ನೋಡಲ್ ಅಧಿಕಾರಿ ನವೀನ್ ಕುಮಾರ್ ಪ್ರಾಸ್ತಾವಿಕ ಮಾತನ್ನಾಡಿ ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ಸಿಲಿಂಡರ್, ೧.೨ ಮೀಟರ್ ಉದ್ದದ ಪೈಪ್, ರೆಗ್ಯುಲೇಟರ್, ೨ ಬರ್ನಲ್ ಸ್ವವ್ ನೀಡುತ್ತೇವೆ. ಜಿಲ್ಲೆಯಲ್ಲಿ ನಲವತ್ತು ಸಾವಿರ ಫಲಾನುಭವಿಗಳು ಇದ್ದಾರೆ. ಅವರಲ್ಲಿ ಈಗಾಗಲೇ ನಾಲ್ಕು ಸಾವಿರ ಜನರಿಗೆ ವಿತರಿಸಿದ್ದೇವೆ. ಇನ್ನು ಒಂದು ವರ್ಷದಲ್ಲಿ ಉಳಿದ ಫಲಾನುಭವಿಗಳ ಮನೆಗಳಿಗೆ ಈ ಸೌಲಭ್ಯವನ್ನು ತಲುಪಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸುಳ್ಯ ಶಾಸಕ ಅಂಗಾರ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹೆಚ್‌ಪಿಸಿಎಲ್ ಹಿರಿಯ ಪ್ರಬಂಧಕ ಎನ್.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕರುಗಳಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ , ಹೆಚ್‌ಪಿಸಿಎಲ್ ಕಂಪೆನಿಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಬಿಜೆಪಿ ನಾಯಕ ರಾಜೇಶ್‌ನಾಯಕ್ ಉಳಿಪ್ಪಾಡಿಗುತ್ತು ಸ್ವಾಗತಿಸಿದರು.