ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಉಜ್ವಲ ಯೋಜನೆಯ ಸವಲತ್ತಿನ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸದ ನಳೀನ್ ಕುಮಾರ್ ಕಟೀಲು ಅವರು ಮನವಿಮಾಡಿದ್ದಾರೆ.
ಬಿ.ಸಿ.ರೋಡಿನಲ್ಲಿರುವ ಪಕ್ಷ ಕಚೇರಿಯಲ್ಲಿ ಶುಕ್ರವಾರ ಅಮ್ಟಾಡಿ, ಕಳ್ಳಿಗೆ ಹಾಘೂ ಬಂಟ್ವಾಳ ಪುರಸಭಾ ವ್ಯಾಪ್ತಿಯ Pಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಇಡೀ ವಿಶ್ವವು ಇಂದು ಭಾರತದ ಕಡೆಗೆ ನೋಡುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ಪ್ರಧಾನಿ ನರೇಂದ್ರಮೋದಿಯವರಾಗಿದ್ದಾರೆ. ದೇಶದಲ್ಲಿ ಎಲ್ಲರಿಗೂ ಅನಿಲ ಸೌಲಭ್ಯ ಸಿಗಬೇಕೆಂಬ ಮೋದಿಯವರ ಕನಸು ಸಾಕಾರ ಗೊಳ್ಳಲೆಂಬಂತೆ ಈ ಉಜ್ವಲ ಯೋಜನೆ ಜಾರಿಗೊಳಿಸಲಾಗಿದೆ ಎಂದರು. ಈ ಯೋಜನೆಯಲ್ಲಿ 2011 ರ ನಂತರ ನೊಂದಾವಣಿಯಾದ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ಉಚಿತ ಅನಿಲಸೌಲಭ್ಯ ದೊರಕುವುದು, ಅರ್ಹರು ಇದರ ಸೌಲಭ್ಯ ಪಡೆಯಲು ತಕ್ಷಣ ತಮ್ಮ ಹೆಸರನ್ನು ನೊಂದಾಯಿಸುವಂತೆ ಅವರು ಕರೆನೀಡಿದರು. ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ದೇಶದ ಪ್ರಗತಿಗೆ ಬಿಜೆಪಿಯ ಕೊಡುಗೆ ಅಪಾರ, ಜನರ ಭಾವನೆಗಳಿಗೆ ಬೆಲೆನೀಡಿದ ಸರ್ಕಾರ ಅದು ಬಿಜೆಪಿ ಮಾತ್ರ ಎಂದರು.
ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ , ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು. ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ , ಪ್ರಧಾನಕಾಐದರ್ಶಿಗಳಾದ ಮೋನಪ್ಪ ದೇವಸ್ಯ, ರಾಮದಾಸ್ ಬಂಟ್ವಾಳ ಮೊದಲಾದವರು ವೇದಿಕೆಯಲ್ಲಿದ್ದರು. ಪ್ರವಾಸ ನಡೆಸಿದ ಸಂಸದ ನಳಿನ್ ಕುಮಾರ್ ಕಟೀಲ್ ರವರು ಬಡಗಬೆಳ್ಳೂರು ಆದಿಶಕ್ತಿ ದೇವಸ್ಥಾನದ ಬಳಿ, ಬಿ.ಸಿ.ರೋಡಿನ ಬಿಜೆಪಿ ಕಚೇರಿ , ಮಧ್ವ , ಉಳಿ , ಅಲ್ಲಿಪಾದೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.