ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರದ್ಯೋತ ಸಂಸ್ಕೃತ ಸಂಘವನ್ನು ಹಿರಿಯ ಶಿಕ್ಷಕ ಜಯಂತ ನಾಯಕ್ ಕುಂಡೇರಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ನಮ್ಮ ಹಿರಿಯರು ನಮ್ಮ ಆಸ್ತಿ. ಅವರಲ್ಲಿನ ಅಪಾರ ಅನುಭವವೇ ಒಂದು ಜೀವನ ಪಾಠ. ಇಂದಿನ ಎಲ್ಲಾ ಪಠ್ಯಕ್ರಮವನ್ನು ಮೀರಿದ ಜ್ಞಾನ ಅವರ ಅನುಭವದಲ್ಲಿ ಬಂದಿದೆ. ಆದ್ದರಿಂದ ಒಡನಾಟವೇ ಒಂದು ಜೀವನ ಶಿಕ್ಷಣ ಎಂದು ಅವರು ಅಭಿಪ್ರಾಯಪಟ್ಟರು.
ಗೌರವ ಸ್ವೀಕರಿಸಿದ ಇನ್ನೋರ್ವ ಹಿರಿಯ, ನಿವೃತ್ತ ಶಿಕ್ಷಕಿ ಜಯಲಕ್ಷ್ಮಿ ನಂದೋಡಿ ಸಂಸ್ಥೆಗೆ ಶುಭ ಹಾರೈಸಿದರು. ಹರಿಕಥೆಯನ್ನು ಶಿರಸಿಯ ಈಶ್ವರದಾಸ ಕೊಪ್ಪೆಸರ ನಡೆಸಿಕೊಟ್ಟರು. ಈ ಸಂದರ್ಭ ಹಾರ್ಮೋನಿಯಂನಲ್ಲಿ ರಮೇಶ್ ಹೆಬ್ಬಾರ್, ತಬಲಾದಲ್ಲಿ ಪೃಥ್ವಿರಾಜ್, ತೃತೀಯ ಬಿ.ಕಾಂ ಸಹಕರಿಸಿದರು. ಸಂಸ್ಕೃತ ಸಂಘದ ಕಾರ್ಯದರ್ಶಿ ಮಹಾಲಕ್ಷ್ಮಿ ಸ್ವಾಗತಿಸಿ, ಸದಸ್ಯರಾದ ಪೂಜಾ ಹಾಗೂ ಶಶಿಪ್ರಭಾ ಸಮ್ಮಾನಿತರನ್ನು ಪರಿಚಯಿಸಿ, ಅಧ್ಯಕ್ಷೆ ವಿದ್ಯಾಆರ್ ನಿರೂಪಿಸಿ, ಚಂದ್ರಿಕಾ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…