ಸಮಾಜದಲ್ಲಿ ಹಣ ಸಂಪಾದಿಸುವ ದೃಷ್ಟಿಯಿಂದ ದೊಡ್ಡ ಮಹಲ್‌ಗಳು, ಕಟ್ಟಡಗಳು ತಲೆಯೆತ್ತುತ್ತಿದೆ. ಧಾರ್ಮಿಕ ಶಿಕ್ಷಣ ಕೇಂದ್ರಗಳು ಕಡಿಮೆಯಾಗುತ್ತಿದೆ. ಹೆತ್ತವರು ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸವನ್ನು ನೀಡುವ ಭರದಲ್ಲಿ ಧಾರ್ಮಿಕ ಶಿಕ್ಷಣದ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಕೂರ್ನಡ್ಕ ಜುಮಾ ಮಸೀದಿ ಖತೀಬು ಅಬೂಬಕ್ಕರ್ ಸಿದ್ದೀಕ್ ಜಲಾಲೀ ಹೇಳಿದರು.
ವಿಟ್ಲದ ಮೇಗಿನಪೇಟೆಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಅಲ್‌ಖೈರ್ ಮಹಿಳಾ ಶರೀಯತ್ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಧಾರ್ಮಿಕ ಶಿಕ್ಷಣ ಕೊರತೆಯಿಂದಾಗಿ ಇಂದು ಹೆಣ್ಮಕ್ಕಳು ಕೆಟ್ಟದಾರಿ ಹಿಡಿಯುವ ಹಂತಕ್ಕೆ ತಲುಪುತ್ತಿದ್ದಾರೆ. ಅವುಗಳನ್ನು ಹೋಗಾಲಾಡಿಸುವ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಪ್ರತಿಯೊಬ್ಬರು ಹೆಣ್ಮುಕ್ಕಳು ಕಳಿತು ಮೈಗೂಡಿಸಿಕೊಂಡು ಹೋಗುವ ಉದ್ದೇಶದಿಂದ ಇಂತಹ ಶರೀಯತ್ ಕಾಲೇಜುಗಳ ಅವಶ್ಯಕತೆ ಇದೆ ಎಂದರು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ದುವಾಃ ಉದ್ಘಾಟಿಸಿದರು. ವಿಟ್ಲ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ವಿ.ಎಚ್ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.
ಅಲ್‌ಖೈರ್ ಎಜ್ಯುಕೇಶನಲ್ ಟ್ರಸ್ಟ್‌ನ ಸದಸ್ಯರಾದ ಇಬ್ರಾಹಿಂ ಏರ್‌ಸೌಂಡ್ಸ್, ಅಬ್ದುಲ್ಲ ಹಾಜಿ ಕಾನತ್ತಡ್ಕ, ಕೇಂದ್ರ ಜುಮಾ ಮಸೀದಿ ಖತೀಬು ಅಬ್ದುಲ್ ಸಲಾಂ ಲತೀಫಿ, ವಿಟ್ಲ-ಪರ್ತಿಪ್ಪಾಡಿ ಮಸೀದಿ ಖತೀಬು ಅಬ್ದುರ್ರಹ್ಮಾನ್ ಫೈಝೀ, ವಿಟ್ಲ ಕೇಂದ್ರ ಜುಮಾ ಮಸೀದಿ ಮಾಜಿ ಖತೀಬು ಮೂಸಲ್ ಫೈಝಿ, ಹಕೀಂ ಅರ್ಶದಿ, ಇಬ್ರಾಹಿಂ ಹಾಜಿ ಪೊನ್ನೋಟ್ಟು, ಇಬ್ರಾಹಿಂ ಮುಸ್ಲಿಯಾರ್ ಪರ್ತಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಇಮ್ರಾನ್ ಹುದವಿ ಸ್ವಾಗತಿಸಿ, ನಿರೂಪಿಸಿದರು. ರಫೀಕ್ ಪೊನ್ನೋಟ್ಟು ವಂದಿಸಿದರು.