ಬೈಪಾಸು ರಸ್ತೆಯಿಂದ ಮೂಡುಬಿದರೆಗೆ ತೆರಳುವ ಮಾರ್ಗದಲ್ಲಿರುವ ವೈದ್ಯನಾಥ ದೇವಸ್ಥಾನದ ಬಳಿ ಇರುವ ಅಪಾಯಕಾರಿ ತಿರುವಿನ ಬಳಿ ಮತ್ತೊಂದು ಅಪಘಾತ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಹುಂಡೈ ಇಯಾನ್ ಕಾರೊಂದು ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದು, ಅವರನ್ನು ಅದೇ ದಾರಿಯಲ್ಲಿ ಆಗಮಿಸುತ್ತಿದ್ದ ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯ್ಲ ತುಂಬೆ ಆಸ್ಪತ್ರೆಗೆ ಸಾಗಿಸಲು ನೆರವಾದರು.
ಇದೇ ಜಾಗದ ಸಮೀಪ ಕಳೆದ ಆರು ತಿಂಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ಅಪಘಾತವಿದು. ಒಟ್ಟಾರೆಯಾಗಿ ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾಲ್ಕು ಅಪಘಾತಗಳು ಸಂಭವಿಸಿವೆ.
ಕೆಲ ತಿಂಗಳ ಹಿಂದೆ ಇದೇ ಜಾಗದಲ್ಲಿ ವಿಟ್ಲದ ಅರ್ಚಕ ಕಾರು ಅಪಘಾತಕ್ಕೆ ಬಲಿಯಾಗಿದ್ದರು. ಅಪಾಯಕಾರಿ ತಿರುವಿನಲ್ಲಿ ಎಚ್ಚರಿಕೆ ಫಲಕಗಳನ್ನು ಚಾಲಕರಿಗೆ ಕಾಣಿಸುವಂತೆ ಹಾಕುವುದು ಹಾಗೂ ಅಪಘಾತ ತಡೆಗೆ ಕ್ರಮ ಕೈಗೊಳ್ಳುವುದನ್ನು ಇಲ್ಲಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…