ತಾಲೂಕಿನ ಕಕ್ಯಪದವು ಉಳಿ ಎಂಬಲ್ಲಿ ಎಲ್.ಸಿ.ಆರ್. ಇಂಡಿಯನ್ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ ನಡೆಯಿತು.
ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಸುಧಾಕರ ಪ್ರಭು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಎನ್ನೆಸ್ಸೆಸ್ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರ್ವಧರ್ಮಗಳು ಒಂದೇ, ನಾವೆಲ್ಲರೂ ಒಂದಾಗಿ ಬಾಳಿ ಶಿಸ್ತು, ಸಂಯಮ, ಹೊಂದಾಣಿಕೆ, ಸಮಯಪಾಲನೆ, ಸೇವಾಮನೋಭಾವನೆಯನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಲ್.ಸಿ.ಆರ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಪ್ರವೀಣ್ ಎ. ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಿಯಮಗಳಿಗೆ ಬದ್ಧರಾಗಿ ಅದನ್ನು ಜೀವನದಲ್ಲಿ ಅನುಸರಿಸಕೊಳ್ಳಬೇಕು ಎಂದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕz ಯೋಜನಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಶಿವರಾಜ್ ಗಟ್ಟಿ, ಕಲಾ ವಿಭಾಗದ ಮುಖ್ಯಸ್ಥೆ ವಿಂದ್ಯಾಶ್ರೀ, ವಿದ್ಯಾರ್ಥಿ ಸಂಘದ ನಾಯಕ ಪ್ರೀತಮ್, ನಾಯಕಿ ದಿಲ್‌ಶಾದ್ ಬಾನು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕ ಮಿಥುನ್ ಕುಮಾರ್, ನಾಯಕಿ ರೋಶಲ್ ಸವಿತಾ ಕೊರ್ಡೆರೊ ಉಪಸ್ಥಿತರಿದ್ದರು.
ಘಟಕದ ನಾಯಕ ಮಿಥುನ್ ಕುಮಾರ್ ಸ್ವಾಗತಿಸಿ, ಯೋಜನಾಧಿಕಾರಿ ಶಿವರಾಜ್ ಗಟ್ಟಿ ಪ್ರಾಸ್ತವಿಕ ಮಾತನಾಡಿ, ನಾಯಕಿ ದಿಲ್‌ಶಾದ್ ಬಾನು ವಾರ್ಷಿಕ ವರದಿ ವಾಚಿಸಿದರು. ನಾಯಕಿ ರೋಶಲ್ ಸವಿತಾ ಕೊರ್ಡೆರೊ ವಂದಿಸಿದರು. ಪಯಾಜ್ ಮತ್ತು ಸುಜೀತ್ ದ್ವಿತೀಯಾ ವಾಣಿಜ್ಯ ವಿಭಾU ಕಾರ್ಯಕ್ರಮ ನಿರೂಪಿಸಿದರು.