ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಂತೆ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿಯು ಅಧ್ಯಕ್ಷರಾಗಿ ಮಚ್ಚೇಂದ್ರ ಸಾಲ್ಯಾನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೃಷ್ಣ ಶ್ಯಾಮ್, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಪುಷ್ಪರಾಜ ಶೆಟ್ಟಿ, ಪುರುಷೋತ್ತಮ ಸಾಲ್ಯಾನ್ ಶಂಭೂರು, ಕಾರ್ಯದರ್ಶಿಯಾಗಿ ಕೇಶವ ಅಂತರ, ಸಂಘಟನಾ ಕಾರ್ಯದರ್ಶಿಯಾಗಿ ಸಂದೀಪ್ ಸಾಲ್ಯಾನ್, ಜತೆ ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ, ಕೋಶಾಧಿಕಾರಿಯಾಗಿ ದಾಮೋದರ್ ಮಾಸ್ತರ್ ಹಾಗೂ ಸಮಿತಿ ಸದಸ್ಯರಾಗಿ ಮಂಜುವಿಟ್ಲ, ಉಮೇಶ್ ಪಿ.ಕೆ, ದಾಮೋದರ ಬಿ.ಎಂ., ರಾಜ್‌ಕುಮಾರ್, ಭೋಜಮೂಲ್ಯ, ತಾರಾನಾಥ ಕೊಟ್ಟಾರಿ ತೇವು, ಜಯರಾಜ್ ಪ್ರಕಾಶ್, ಸುರೇಶ್ ಅವರನ್ನು ಆಯ್ಕೆಗೊಳಿಸಲಾಯಿತು.