ಇರಾ ಎಂಬ ಪುಟ್ಟ ಗ್ರಾಮದ ಹೆಸರು ಮತ್ತೊಮ್ಮೆ ಮಿಂಚಿದೆ.
ನಮ್ಮ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಹೆಮ್ಮೆಯ ಫೊಟೋಗ್ರಾಫರ್ ಅಪುಲ್ ಆಳ್ವ ಅವರಿಗೆ ಫೊಟೋಗ್ರಫಿಯಲ್ಲಿ ಮತ್ತೊಂದು ಪ್ರಶಸ್ತಿ ಬಂದಿದೆ.
ಸರಳಜೀವನ ಎಂಬ ಟಿ.ವಿ.ವಾಹಿನಿ ಆಯೋಜಿಸಿದ್ದ ಸರಳಜೀವನ ಫೊಟೋಗ್ರಫಿ ಅವಾರ್ಡ್ ಇದು. ಫೊಟೋ ಟ್ರಾವೆಲ್ ವಿಭಾಗದಲ್ಲಿ ಅಪುಲ್ ಸೆರೆಹಿಡಿದ ಸಾತೊಡ್ಡಿ ಸೌಂದರ್ಯ ಎಂಬ ಶೀರ್ಷಿಕೆಯ ಚಿತ್ರಕ್ಕೆ ಪ್ರಥಮ ಸ್ಥಾನ ಬಂದಿದೆ. ಇದೇ ಚಿತ್ರ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಗಳಿಸಿತ್ತು. ಸುಮಾರು 1200ಕ್ಕೂ ಅಧಿಕ ಚಿತ್ರಗಳ ಪೈಕಿ ನಮ್ಮೂರಿನ ಅಪುಲ್ ಚಿತ್ರ ಗೆದ್ದಿದೆ ಎಂಬುದು ಹೆಮ್ಮೆಯ ವಿಷಯ.
ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ಹಾಗು ಛಾಯ ಚಿತ್ರಪ್ರದರ್ಶನ ನಡೆಯಿತು .ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಟಿ ಶರ್ಮಿಳಾ ಮಾಂಡ್ರೆ ನಡೆಸಿ ಕೊಟ್ಟರು . ಸರಳಜೀವನ ಚಾನೆಲ್ ಮುಖ್ಯಸ್ಥ ರಘುನಾಥ ರೆಡ್ಡಿ , ನಿರೂಪಕಿ ರಕ್ಷಾ ಸಮತ , ಖ್ಯಾತ ಛಾಯಾಗ್ರಾಹಕರಾದ ಶಿವು ಕೆ , ವಿ ಡಿ ಭಟ್ ಸುಗಾವಿ , ಇಂದ್ರಕುಮಾರ್ ದಸ್ತೆಣ್ಣವರ್ , ಮಂಗಳೂರಿನ ಪುನೀಕ್ ಸೇರಿದಂತೆ ಹಲವಾರು ಛಾಯಾಸಕ್ತರು ಉಪಸ್ಥಿತರಿದ್ದರು .
ಕಂಗ್ರಾಟ್ಸ್ ಅಪುಲ್, ನಿಮ್ಮ ಸಾಧನೆ ಮತ್ತಷ್ಟು ಹೆಚ್ಚಾಗಲಿ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…