ಇಲ್ಲಿವೆ ತುಪ್ಪದ ಹಲವು ಉಪಯೋಗ

  • ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಆಭ್ಯಂತರ  ಉಪಯೋಗಗಳು:

ಸಾಧಾರಣವಾಗಿ ಊಟವನ್ನು ತುಪ್ಪ ಹಾಕಿದ ಅನ್ನದೊಂದಿಗೆ ಪ್ರಾರಂಭಿಸುವುದು ರೂಢಿ. ಇದರ ಹಿಂದೆ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವ ವೈಜ್ಞಾನಿಕ ವಿಷಯ ಒಳಗೊಂಡಿದೆ. ಯುಕ್ತಿ ಯುಕ್ತವಾಗಿ ತುಪ್ಪವನ್ನು ಸೇವಿಸುವುದರಿಂದ ನಮ್ಮ ದೇಹದ ವ್ಯಾಧಿಕ್ಷಮತೆ, ಬಲ,ಕಾಂತಿ ಅಧಿಕವಾಗುವುದರ ಜೊತೆಗೆ ಹಲವಾರು ತೊಂದರೆಗಳನ್ನು ಸಹ ನಿವಾರಿಸುತ್ತದೆ.

  1. ತುಪ್ಪವು ಶರೀರದಲ್ಲಿನ ವಾತ ಮತ್ತು ಪಿತ್ತ ದೋಷಗಳನ್ನು ಶಮನ ಗೊಳಿಸುತ್ತದೆ. ಆದುದರಿಂದ ಇದು ವಾತ ಮತ್ತು ಪಿತ್ತ ಪ್ರಕೃತಿಯ ಜನರಿಗೆ ಬಹು ಪ್ರಯೋಜನಕಾರಿಯಾಗಿದೆ.
  2. ತುಪ್ಪವು ನಮ್ಮ ಜಠರಾಗ್ನಿಯ ಬಲವನ್ನು ಹೆಚ್ಚಿಸುತ್ತದೆ. ಹಾಗಾಗಿ ಜೀರ್ಣ ಶಕ್ತಿಯ ಕೊರತೆ ಇದ್ದಲ್ಲಿ ಪ್ರತಿದಿನ ಬೆಳಗ್ಗೆ 10 ಮಿ.ಲೀ ಯಷ್ಟು ತುಪ್ಪವನ್ನು ಬಿಸಿನೀರಿನ ಜೊತೆ ಸೇವಿಸುವುದು ಉತ್ತಮ.
  3. ಒಣ ಕೆಮ್ಮು ಹಾಗು ಸ್ವರದ ಸಮಸ್ಯೆ ಇದ್ದಾಗ 1 ಚಮಚದಷ್ಟು ತುಪ್ಪವನ್ನು ಗಂಟಲಿನಲ್ಲಿ ಸಾಧಾರಣ 1 ನಿಮಿಷದ ಕಾಲ ಇಟ್ಟು ನಂತರ ನುಂಗಬೇಕು.
  4. ಕಫದ ಸಮಸ್ಯೆ ಬಾಧಿಸದಿದ್ದರೆ ದಿನಾ 1 ಚಮಚದಷ್ಟು ತುಪ್ಪವನ್ನು ಸೇವಿಸುವುದರಿಂದ ಚರ್ಮದ ಕಾಂತಿ ಅಧಿಕವಾಗುತ್ತದೆ.
  5. ನಿಯಮಿತವಾಗಿ ತುಪ್ಪದ ಸೇವನೆಯಿಂದ  ಕಣ್ಣಿನ ಗೋಚರ ಸಾಮರ್ಥ್ಯವು  ಅಧಿಕವಾಗುತ್ತದೆ.
  6. ಕ್ಷೀಣ ಹಾಗು ಬಲಹೀನ ವ್ಯಕ್ತಿಗಳಲ್ಲಿ ದೇಹದ ತೂಕ ಮತ್ತು ಬಲವನ್ನು ಹೆಚ್ಚಿಸುತ್ತದೆ.
  7. ಮಧ್ಯಪಾನಿಗಳಿಗೆ ಇದು ಉತ್ತಮ ಪಥ್ಯ ಆಹಾರವಾಗಿದ್ದು ಶರೀರದ ಅಂಗಾಂಗಗಳನ್ನು ರಕ್ಷಿಸಲು ಸಹಕರಿಸುತ್ತದೆ
  8. ಪುರುಷರಲ್ಲಿ ವೀರ್ಯದ ಬಲ ಹಾಗು ಪ್ರಮಾಣವನ್ನು ಹೆಚ್ಚಿಸುತ್ತದೆ
  9. ಜ್ವರದ ಸಂದರ್ಭದಲ್ಲಿ ಅಲ್ಪ ಪ್ರಮಾಣದ ತುಪ್ಪವನ್ನು ಸೇವಿಸುವುದರಿಂದ ದೇಹದ ಉರಿ ಕಡಿಮೆಯಾಗುತ್ತದೆ.
  10. ಗರ್ಭಿಣಿಯರಿಗೆ ತುಪ್ಪವು ಪ್ರತಿ ಹಂತದಲ್ಲೂ ಉತ್ತಮ ಪಥ್ಯ ಆಹಾರವಾಗಿದೆ.
  11. ಹೆರಿಗೆ ನೋವು ಆರಂಭ ಆದ ತಕ್ಷಣ ಬಿಸಿ ಗಂಜಿಗೆ ತುಪ್ಪ ಹಾಕಿ ಸೇವಿಸಿದರೆ ಸುಖ ಪ್ರಸವಕ್ಕೆ ಸಹಕಾರಿಯಾಗುತ್ತದೆ.
  12. ಬಾಣಂತಿಯರು ನಿಯಮಿತವಾಗಿ ತುಪ್ಪವನ್ನು ಸೇವಿಸುವುದರಿಂದ ಮೊಲೆ ಹಾಲಿನ ಗುಣ ವೃದ್ಧಿಯಾಗುತ್ತದೆ.
  13. ಎಳೆ ಮಕ್ಕಳಿಗೆ 2 ರಿಂದ 4 ಬಿಂದು ತುಪ್ಪವನ್ನು ಕೊಡುವುದರಿಂದ ಜೀರ್ಣ ಶಕ್ತಿ ಅಧಿಕವಾಗುತ್ತದೆ,ಮಲವಿಸರ್ಜನೆ ಸರಿಯಾಗಿ ಆಗುತ್ತದೆ ಮತ್ತು ಚರ್ಮದ ಕಾಂತಿ ಅಧಿಕವಾಗುತ್ತದೆ.
  14. ಹೊಟ್ಟೆಯಲ್ಲಿ ಶಬ್ದ, ನೋವು ಹಾಗು ವಾಂತಿ ಇದ್ದರೆ 1 ಚಮಚ ತುಪ್ಪವನ್ನು ಸೇವಿಸಬೇಕು
  15. ಮಲಬದ್ಧತೆ ಇದ್ದಾಗ 1 ಗ್ಲಾಸು ಬಿಸಿಹಾಲಿಗೆ 1 ಚಮಚ ತುಪ್ಪ ಹಾಕಿ ಸೇವಿಸಿದರೆ ಮಲಪ್ರವೃತ್ತಿ ಸರಿಯಾಗಿ ಆಗುತ್ತದೆ.
  16. ಬೆಳಗ್ಗೆ 1 ಗ್ಲಾಸು ಬಿಸಿನೀರಿಗೆ 1 ಚಮಚ ತುಪ್ಪ ಸೇರಿಸಿ ಕುಡಿದರೆ ಮೂತ್ರ ಪ್ರವೃತ್ತಿ ಸರಿಯಾಗಿ ಆಗುತ್ತದೆ.
  17. ಬೆಳ್ಳುಳ್ಳಿ ಮತ್ತು ತುಪ್ಪದ ಮಿಶ್ರಣವು ಜ್ವರದ ಬಾಧೆಯನ್ನು ನಿವಾರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

 

ಹೆಚ್ಚಿನ ಓದಿಗೆ ಕ್ಲಿಕ್ ಮಾಡಿರಿ:

 

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts