ಶ್ರವಣಬೆಳಗೊಳದಲ್ಲಿ 2018ನೇ ಸಾಲಿನಲ್ಲಿ ಜರಗಲಿರುವ ಶ್ರೀ ಗೊಮ್ಮಟೇಶ್ವರ ಮಹಾಮಸ್ತಾಭಿಷೇಕ ಮಹೋತ್ಸವದ ರಾಜ್ಯ ಮಟ್ಟದ ಸಮಿತಿಯಲ್ಲಿ ಸದಸ್ಯರಾಗಿ ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಬಂಟ್ವಾಳ ಇವರನ್ನು ನೇಮಕ ಮಾಡಿ ಕರ್ನಾಟಕ ಸರಕಾರ ಆದೇಶಿಸಿದೆ.
ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ, ಬೆಂಗಳೂರು ಇದರ ನಿರ್ದೇಶಕರಾಗಿರುವ ಇವರು, ಜೈನ ಸಮಾಜದ ಧಾರ್ಮಿಕ ಹಾಗೂ ವಿವಿಧ ಸಂಘಟನೆಗಳಲ್ಲಿದ್ದು ಬಂಟ್ವಾಳ ಜೈನ್‌ಮಿಲನ್ ಮಾಜಿ ಅಧ್ಯಕ್ಷರು ಹಾಗೂ ಭಾರತೀಯ ಜೈನ್‌ಮಿಲನ್ ಮಂಗಳೂರು ವಿಭಾಗ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…