ಕರೋಪಾಡಿ ಗ್ರಾಮ ಪಂಚಾಯತಿಗೆ ಭಾನುವಾರ ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎ.ಮಹಮ್ಮದ್ ಅನ್ವರ್ 449 ಮತಗಳನ್ನು ಗಳಿಸುವ ಮೂಲಕ ವಿಜಯಿಯಾಗಿದ್ದಾರೆ.
ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಹರೀಶ್ ಕೋಡ್ಲ 320 ಮತಗಳನ್ನು ಗಳಿಸಿದ್ದಾರೆ. 21 ಮತಗಳು ತಿರಸ್ಕೃತಗೊಂಡಿವೆ.
ಮತದಾನ ಕೇಂದ್ರದಲ್ಲಿ ಒಟ್ಟು 769 ಮತಗಳು ದಾಖಲಾಗಿದ್ದವು. ಅವುಗಳಲ್ಲಿ 21 ತಿರಸ್ಕೃತಗೊಂಡವು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. 517 ಪುರುಷ ಮತದಾರರ ಪೈಕಿ 400 ಹಾಗೂ 462 ಮಹಿಳಾ ಮತದಾರರ ಪೈಕಿ 390 ಮಂದಿ ಮತ ಚಲಾಯಿಸಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಆಗಿದ್ದ ಸ್ಥಳೀಯ ಸದಸ್ಯ ಜಲೀಲ್ ಅವರ ಹತ್ಯೆ ಬಳಿಕ ಸ್ಥಾನ ತೆರವಾಗಿದ್ದು, ಅವರ ಸಹೋದರ ಅನ್ವರ್ ಸ್ಪರ್ಧಿಸಿದ್ದರು.
ತಹಶೀಲ್ದಾರ್ ಪುರಂದರ ಹೆಗ್ಡೆ ಮಾರ್ಗದರ್ಶನದಲ್ಲಿ ಉಪತಹಶೀಲ್ದಾರ್ ಪರಮೇಶ್ವರ ನಾಯ್ಕ್ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು. ವಿಟ್ಲ ಎಸ್.ಐ. ನಾಗರಾಜ್ ನೇತೃತ್ವದಲ್ಲಿ ಬಂದೋಬಸ್ತ್ ಇತ್ತು.
ಇನ್ನಷ್ಟು ವರದಿಗೆ: