ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಅವರ ಬರ್ಬರ ಹತ್ಯೆ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ನಡೆದಿದ್ದ ಉಪಚುನಾವಣೆಯಲ್ಲಿ 129 ಮತಗಳ ಅಂತರದಿಂದ ಜಯ ಗಳಿಸಿದ ಜಲೀಲ್ ಸಹೋದರ ಎ.ಮಹಮ್ಮದ್ ಅನ್ವರ್ ಮತ್ತು ಬೋಳಂತರು ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾದ ಆಶಾ ಬೋಳಂತೂರು ಇವರನ್ನು ಬಿಸಿರೋಡಿನಲ್ಲಿ ಕಾಂಗ್ರೇಸ್ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭ ಮಾತನಾಡಿದ ಜಿ.ಪಂ.ಸದಸ್ಯ ಎಂಎಸ್ ಮಹಮ್ಮದ್ ಮಾತನಾಡಿ ಜಲೀಲ್ ಕರೋಪಾಡಿ ಅವರ ಹತ್ಯೆಗೆ ಅ ಕ್ಷೇತ್ರದ ಜನತೆ ಉತ್ತರವನ್ನು ಕೊಟ್ಟಿದ್ದಾರೆ. ಆ ಮೂಲಕ ಅವರ ಜನಪರ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ಜಲೀಲ್ ಸಹೋದರ ಎ.ಮಹಮ್ಮದ್ ಅನ್ವರ್ ಅವರಿಗೆ ಜನ ಆರ್ಶಿವಾದ ಮಾಡಿದ್ದಾರೆ ಎಂದು ಹೇಳಿದರು. ಬಳಿಕ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ ಜಲೀಲ್ ಅವರ ಜನಪರ ಕೆಲಸ ಮತ್ತು ಸೌಹಾರ್ದತೆ ಜೊತೆಗೆ ಉಸ್ತುವಾರಿ ಸಚಿವ ಬಿ ರಮನಾಥ ರೈ ಅವರ ಅಭಿವೃದ್ದಿ ಕೆಲಸಕ್ಕೆ ಸಿಕ್ಕ ಜಯ ಎಂದು ಹೇಳಿದರು. ಈ ಸಂದರ್ಭ ತಾ.ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಬಾಳಪ್ಪ ಶೆಟ್ಟಿ, ಮಹಮ್ಮದ್ ಅನ್ವರ್, ಮೂಸಬ್ಬ, ವಿಜಯ ಪೂಜಾರಿ, ಪುತ್ತುಮೋನು, ರಹೀಂ ಮಿತ್ತನಡ್ಕ, ಸಿದ್ದೀಕ್, ರಜಾಕ್ ಸೇರಾಜೆ, ಶಗೀರ್ ಮತ್ತಿರರು ಉಪಸ್ಥಿತರಿದ್ದರು