ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ 2017-18 ಬಿ.ಸಿ.ರೋಡ್ ಬಂಟ್ವಾಳದ ರೋಟರಿ ಭವನದಲ್ಲಿ ಜುಲೈ 10ರ ಸೋಮವಾರ ನಡೆಯಲಿದೆ.
ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ನಡೆಯುವ ಈ ಶಿಬಿರವನ್ನು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ರೋಟರಿ ಭವನ ಆಯೋಜಿಸಿದೆ.
ದೈಹಿಕ ತಜ್ಞ ವೈದ್ಯರು, ಮನೋತಜ್ಞರು, ವಾಕ್ ಶ್ರವಣ ತಜ್ಞರು, ಕಣ್ಣಿನ ತಜ್ಞರು, ಇಎನ್‌ಟಿ, ಆಡಿಯಾಲಜಿ ತಜ್ಞರು, ಕ್ಲಿನಿಕಲ್ ಸೈಕಾಲಜಿಸ್ಟ್ ಗಳು ಇಲ್ಲಿ ಭಾಗವಹಿಸುವರು. ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1ರಿಂದ 10ನೇ ತರಗತಿಯ ವಿಕಲಚೇತನ ಮಕ್ಕಳಿಗಾಗಿ ಈ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದಾಖಲಾಗಿರುವ ವಿಕಲಚೇತನ ಮಕ್ಕಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕಾಗಿ ಪೋಷಕರು ಮತ್ತು ಶಾಲಾ ಶಿಕ್ಷಕರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ರಾಜೇಶ್ ಜಿ. ವಿನಂತಿಸಿದ್ದಾರೆ.