ಭಾನುವಾರ ಬಂಟ್ವಾಳ ತಾಲೂಕಿನಾದ್ಯಂತ ಈದುಲ್ ಫಿತ್ರ್ ಸಂಭ್ರಮಾಚರಣೆ .
ವಿವಿಧ ಜುಮಾ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಹಾಗೂ ನಮಾಜ್ ನಿರ್ವಹಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಬಿ.ಸಿ.ರೋಡಿನ ಕೇಂದ್ರ ಜುಮಾ ಮಸೀದಿ ಮಿತ್ತಬೈಲು, ತಲಪಾಡಿ ಜುಮಾ ಮಸೀದಿ, ಗೂಡಿನಬಳಿ, ಜೈನರ ಪೇಟೆ-ಅಕ್ಕರಂಗಡಿ, ಕೆಳಗಿನಪೇಟೆ, ಆಲಡ್ಕ, ಪಾಣೆಮಂಗಳೂರು, ಬೋಳಂಗಡಿ, ಗುಡ್ಡೆಯಂಗಡಿ, ನಂದಾವರ, ಕೊಳಕೆ, ಬೊಳ್ಳಾಯಿ, ಕಲ್ಲಡ್ಕ, ಗೋಳ್ತಮಜಲು, ಪಲ್ಲಮಜಲು, ನೀರಪಾದೆ, ಲೊರೆಟ್ಟೋಪದವು, ಫರಂಗಿಪೇಟೆ, ಕುಂಪನಪದವು, ಅಮೆಮ್ಮಾರ್, ಮಾರಿಪಳ್ಳ, ಪೆರಿಮಾರ್, ಬಡ್ಡೂರು, ತುಂಬೆ, ವಳವೂರು, ಸಂಗಬೆಟ್ಟು-ಕೆರೆಬಳಿ, ಕಲ್ಕುರಿಪದವು, ಮುಲಾರಪಟ್ಣ, ಶುಂಠಿಹಿತ್ತಿಲು, ಅರಳ, ಕೆಳಗಿನವಗ್ಗ, ನಾವೂರು-ಮೈಂದಾಳ, ನಾವೂರು-ಸುಲ್ತಾನ್ ಕಟ್ಟೆ, ಅಜಿಲಮೊಗರು, ಕುಕ್ಕಾಜೆ, ಮಂಚಿಕಟ್ಟೆ, ನೂಜಿ, ನಿರ್ಬೆಲ್, ಇರಾ-ಪರಪ್ಪು, ಬಾಳೆಪುಣಿ, ಸಂಪಿಲ, ಸಜೀಪನಡು, ಗೋಳಿಪಡ್ಪು, ಕೋಟೆಕಣಿ, ಬಡಕಬೈಲು, ಪೊಳಲಿ, ಪಳ್ಳಿಪ್ಪಾಡಿ, ಕಲಾಯಿ, ಅಮ್ಮುಂಜೆ, ತೆಂಕಬೆಳ್ಳೂರು ಸಹಿತ ಹಲವು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.
ಖತೀಬರು ವಿಶೇಷ ಖುತುಬಾ ನಿರ್ವಹಿಸಿದರು. ಮಹತ್ವ ಹಾಗೂ ಪ್ರಾಮುಖ್ಯತೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿಶೇಷ ನಮಾಜ್ ನಿರ್ವಹಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆದ ವಿಶೇಷ ಪ್ರಾರ್ಥನೆಯನ್ನು ಅಶ್ರಫ್ ಫೈಝಿ ನೆರವೇರಿಸಿದರು. ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಈದ್ ಸಂದೇಶ ನೀಡಿದರು.
ತುಂಬೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಅಬ್ದುಲ್ ಲತೀಫ್ ಫೈಝಿ, ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಉಸ್ಮಾನ್ ದಾರಿಮಿ, ಅಮೆಮಾರ್ ಬದ್ರಿಯಾ ಜುಮಾ ಮಸೀದಿ ಅಬೂಸಾಲಿ ಫೈಝಿ, ಸಜೀಪನಡು ಕೇಂದ್ರ ಜುಮಾ ಮಸೀದಿಯಲ್ಲಿ ಅಸ್ಫಾಕ್ ಫೈಝಿ, ಮೇಗೀನಪೇಟೆ ವಿಟ್ಲ ಕೇಂದ್ರ ಜುಮಾ ಮಸೀದಿ ಮೂಸಲ್ ಫೈಝಿ, ಮುಹಿಯುದ್ದೀನ್ ಜುಮಾ ಮಸೀದಿ ವಗ್ಗ ಇಬ್ರಾಹೀಂ ಫೈಝಿ, ಗಡಿಯಾರ್ ಮುಹಿಯುದ್ದೀನ್ ಜುಮಾ ಮಸೀದಿ ಜಮಾಲುದ್ದೀನ್ ದಾರಿಮಿ, ಏನಾಜೆ ಬುಡೋಳಿ ಮುನೀರುಲ್ ಇಸ್ಲಾಮ್ ಮದರಸ ಮಜೀದ್ ದಾರಿಮಿ, ಬದ್ರಿಯಾ ಜುಮಾ ಮಸೀದಿ ಪುಂಜಾಲಕಟೆ ಅಶ್ರಫ್ ಫೈಝಿ, ಮುಬಾರಕ್ ಜುಮಾ ಮಸೀದಿ ಬಾಂಬಿಲ ಸಿರಾಜುದ್ದೀನ್ ಫೈಝಿ ಈದ್ ನಮಾಝ್‌ಗೆ ನೇತೃತ್ವ ನೀಡಿದರು.
ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಭಾನುವಾರ ಮುಂಜಾನೆ ಮುಸ್ಲಿಂ ಬಾಂಧವರು ತಮ್ಮ ಜಮಾಅತ್ ವ್ಯಾಪ್ತಿಗೊಳಪಟ್ಟ ಅರ್ಹ ಕುಟುಂಬಗಳಿಗೆ ಕಡ್ಡಾಯ ಜಕಾತ್ ವಿತರಿಸಿದರು. ಮಸೀದಿಯ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಖಬರ್ ಝಿಯಾರತ್, ರೋಗಿಗಳ ಸಂದರ್ಶನ, ಆಸ್ಪತ್ರೆ ಭೇಟಿ, ವೃದ್ಧರ ಸಂದರ್ಶನದಲ್ಲಿ ತೊಡಗಿಸಿಕೊಂಡರು. ಆಸ್ಪತ್ರೆ, ವೃದ್ಧಾಶ್ರಮ, ಅನಾಥಶ್ರಮಗಳಲ್ಲಿ ಆಹಾರ, ಹಣ್ಣು-ಹಂಪಲು ವಿತರಣೆ ಮಾಡಲಾಯಿತು.