ಜೂನ್ 21ರಂದು ಬೆಳಗ್ಗೆ ಬೆಂಜನಪದವು ಸಮೀಪ ಎಸ್.ಡಿ.ಪಿ.ಐ. ನಾಯಕ ಅಶ್ರಫ್ (35) ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಮಂಗಳೂರಿನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಐಜಿಪಿ ಹರಿಶೇಖರನ್ ಮಾಧ್ಯಮಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಪವನ್ ಕುಮಾರ್ ಅಲಿಯಾಸ್ ಪುಂಡ (24), ಸಂತೋಷ್ ಅಲಿಯಾಸ್ ಸಂತು (23), ಶಿವಪ್ರಸಾದ್ ಅಲಿಯಾಸ್ ಶಿವು (24), ರಂಜಿತ್ (28) ಮತ್ತು ಅಭಿನ್ ರೈ ಅಲಿಯಾಸ್ ಅಭಿ (23) ಎಂಬವರು ಆರೋಪಿಗಳಾಗಿದ್ದು, ಅವರನ್ನು ದಸ್ತಗಿರಿ ಮಾಡಲಾಯಿತು. ಭರತ್ ಕುಮ್ಡೆಲು ಮತ್ತು ದಿವ್ಯರಾಜ ಶೆಟ್ಟಿ ಮಾರ್ಗದರ್ಶನದಲ್ಲಿ ಕೃತ್ಯ ಎಸಗಿದ್ದಾರೆ. ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ದೊರಕಲಿದೆ ಎಂದು ಐಜಿಪಿ ಹರಿಶೇಖರನ್ ಸುದ್ದಿಗಾರರಿಗೆ ತಿಳಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…