ಯೋಗ ದಿನನಿತ್ಯ ಜೀವನದ ಒಂದು ಭಾಗವಾಗಲಿ ಎಂದು ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕ ಶಿವಶಂಕರ್ ಹೇಳಿದರು.
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮನುಷ್ಯನಲ್ಲಿ ಆರೋಗ್ಯವಂತ ಶರೀರ, ಕಂಪನರಹಿತ ಉಸಿರು, ವರ್ತಮಾನದಲ್ಲಿರುವಂತ ಮನಸ್ಸು, ಒಳ್ಳೆಯದನ್ನು ಸಂಗ್ರಹಿಸುವಂತ ಬುದ್ಧಿ, ಸಂತೋಷದ ನೆನಪುಗಳು ಮತ್ತು ಎಲ್ಲವನ್ನು ಒಳಗೊಂಡ ಅಹಂಕಾರ, ಇರಬೇಕು. ಯೋಗ ಮಾಡುವುದರಿಂದ ದೇಹದ ಸೂಕ್ಷ್ಮ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಉತ್ಸಾಹ, ಸೃಜನಶೀಲತೆ, ಉದಾರತೆ ಮೈಗೂಡುವಂತೆ ಮಾಡುತ್ತದೆ. ಹೂವಿನ ಮೊಗ್ಗು ಅರಳಲು ಸೂರ್‍ಯನ ಬೆಳಕು ಬೇಕು, ಹಾಗೆ ಮನುಷ್ಯನ ಮನಸ್ಸು ಅರಳಬೇಕಾದರೆ ಯೋಗ ಬೇಕು. ಆದ್ದರಿಂದ ಯೋಗ ದಿನ ನಿತ್ಯ ಜೀವನದ ಒಂದು ಭಾಗವಾಗಿರಬೇಕು ಎಂದು ಅವರು ಹೇಳಿದರು.
ಆಧುನಿಕ ಯುಗದಲ್ಲಿ ಮನುಷ್ಯ ಒತ್ತಡಗಳ ಸುಳಿಯಲ್ಲಿ ಸಿಲುಕಿದ್ದಾನೆ. ಇಂತಹ ಒತ್ತಡವನ್ನು ಯೋಗ ನಿವಾರಿಸುತ್ತದೆ. ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು ಮನುಷ್ಯನ ಚಿತ್ತದಲ್ಲಿ ಸಾಮಾನ್ಯವಾಗಿ ಇರುತ್ತದೆ. ಮನುಷ್ಯನ ಋಣಾತ್ಮಕ ಭಾವನೆಗಳನ್ನು ದೂರಗೊಳಿಸಿ ಧನಾತ್ಮಕ ಚಿಂತನಗಳನ್ನು ಮೈಗೂಡಿಸಿಕೊಳ್ಳಲು ಯೋಗ ಸಹಕಾರಿ. ಎಂದು ಯೋಗದ ಮಹತ್ವವನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ಟ್ಸ್ ಆಫ್ ಲಿವಿಂಗ್‌ನ ಶಿಕ್ಷಕರಾದ ಸಿ.ರಂಜನ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರಮೇಶ್, ಶಾಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾರೀರಿಕ ಶಿಕ್ಷಕರಾದ ರಾಧಾಕೃಷ್ಣ ಅಡ್ಯಂತಾಯ ಉಪಸ್ಥಿತಿಯಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳಾದ ಯತಿಕಾ ಸ್ವಾಗತಿಸಿದರು. ಶಮಿತ ವಂದಿಸಿದರು. ಶಾರೀರಿಕ ಶಿಕ್ಷಕರಾದ ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿದರು.