ಗುರುವಾರ ಮಧ್ಯಾಹ್ನ ಬಳಿಕ ಆಗಮಿಸಿದ ಎಡಿಜಿಪಿ ಅಲೋಕ್ ಮೋಹನ್ ಅವರು, ಕಲ್ಲಡ್ಕ, ಮೇಲ್ಕಾರ್, ಟೋಲ್ ಬೂತ್ ಮತ್ತು ತುಂಬೆ ಕಡೆಗಳಿಗೆ ತೆರಳಿ, ಬೆಂಜನಪದವು ಸಮೀಪ ತೆರಳಿ ಬಿ.ಸಿ.ರೋಡ್ ನಲ್ಲಿರುವ ಬಂಟ್ವಾಳ ನಗರ ಠಾಣೆಗೆ ಬಂದರು. ಎಸ್ಪಿ ಅಣ್ಣಾಮಲೈ, ಭೂಷಣ್ ಜಿ. ಬೊರಸೆ ಅವರಿಗೆ ಸಾಥ್ ನೀಡಿದರು. ಅದಾದ ಬಳಿಕ ಮತ್ತೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಎಡಿಜಿಪಿ, ಇಡೀ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ನೂತನ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸಹಿತ ಉನ್ನತ ಅಧಿಕಾರಿಗಳು ಜತೆಗಿದ್ದರು.
ಆರೋಪಿಗಳ ಬಂಧನ ಶೀಘ್ರ:
ತಾಲೂಕಿನಲ್ಲಿ ಶಾಂತಿಯುತ ಪರಿಸ್ಥಿತಿಯಿದ್ದೂ ಯಾವುದೇ ತೊಂದರೆಯಿಲ್ಲ. ಬೆಂಜನಪದವು ಕೊಲೆ ಪ್ರಕರಣ ತನಿಖೆ ಪ್ರಗತಿಯಲ್ಲಿದ್ದು ಆರೋಪಿಗಳ ಶೀಘ್ರ ಬಂಧನವಾಗಲಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ನಿಷೇಧಾಜ್ಷೆ ಸಂದರ್ಭ ಪ್ರತಿಭಟನೆಗೆ ಅವಕಾಶ ಇಲ್ಲ
ಜಿಲ್ಲೆಯಲ್ಲಿ ಜೂ.27ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಯಾವುದೇ ರೀತಿಯ ಪ್ರತಿಭಟನೆಗಳಿಗೆ ಅವಕಾಶ ನೀಡುವುದಿಲ್ಲ. ನಿಷೇಧಾಜ್ಞೆ ಸಂದರ್ಭದಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ, ಇನ್ನೂ ಪ್ರತಿಭಟನೆಗೆ ಎಲ್ಲಿ ಅವಕಾಶ ಎಂದು ಎಡಿಜಿಪಿ ಅಲೋಕ್ ಮೋಹನ್ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಡೀಯೋ ವರದಿಗೆ ಕ್ಲಿಕ್ ಮಾಡಿ: