• ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ನಮ್ಮಲ್ಲಿ ಹೆಚ್ಚಿನ ಪಾಯಸ, ಹಲ್ವ, ಕ್ಷೀರ, ಇತ್ಯಾದಿಗಳಿಗೆ ಗೇರು ಬೀಜ ಹಾಕದಿದ್ದರೆ ಅವುಗಳ ಘನತೆ ಕಡಿಮೆ ಎಂದೇ ತಿಳಿಯಲಾಗುತ್ತದೆ. ಈ ಗೇರುಬೀಜ ಅಥವಾ ಗೋಡಂಬಿ ಬೀಜವು ನಮ್ಮ ದೇಹದ ವಿವಿಧ ಅಂಗಾಂಗಗಳಿಗೆ ಬಲದಾಯಕವೂ ಪುಷ್ಟಿದಾಯಕವೂ ಆಗಿದೆ.

  1. ಗೇರು ಬೀಜದಲ್ಲಿರುವ ತಾಮ್ರದ ಅಂಶವು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಉತ್ತಮ ಪ್ರತಿರೋಧ ಅಂಶವಾಗಿದ್ದು ಈ ವ್ಯಾದಿಯಿಂದ ಬಳಲುತ್ತಿರುವವರಿಗೆ ಇದು ಪಥ್ಯ ಆಹಾರವಾಗಿದೆ.
  2. ಇದರಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನ ಅಂಶವಿದ್ದು ಹೃದಯ ರೋಗವನ್ನು ತಡೆಕಟ್ಟಲು ಸಹಕಾರಿಯಾಗಿದೆ.
  3. ಗೇರುಬೀಜದಲ್ಲಿರುವ ಮೆಗ್ನೀಷಿಯಂ ಅಂಶವು ರಕ್ತದ ಒತ್ತಡವನ್ನು ಹತೋಟಿಯಲ್ಲಿಡಲು ಪೂರಕವಾಗಿ ಕೆಲಸ ಮಾಡುತ್ತದೆ.
  4. ಗೇರುಬೀಜದಲ್ಲಿನ ತಾಮ್ರದ ಅಂಶವು ತಲೆಕೂದಲಿನ ಪ್ರಾಕೃತ ಬಣ್ಣ ಉಳಿಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
  5. ಗೋಡಂಬಿ ಬೀಜದಲ್ಲಿರುವ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶವು ಶರೀರದ ಮೂಳೆಯ ದೃಢತೆಯನ್ನು ಕಾಪಾಡಲು ಪ್ರಯೋಜನಕಾರಿಯಾಗಿದೆ.
  6. ಇದು ಪಿತ್ತಕೋಶದ ಕಲ್ಲನ್ನು ತಡೆಕಟ್ಟಲು ಪ್ರಯೋಜನಕಾರಿಯಾಗಿದೆ.
  7. ಇದರಲ್ಲಿರುವ ಉತ್ತಮವಾದ ಕೊಬ್ಬಿನ ಅಂಶವು ಶರೀರದ ತೂಕವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ. ಕ್ಷಯರೋಗ ಹಾಗು ರಕ್ತ ಹೀನತೆಯವರಿಗೆ ಇದು ಉತ್ತಮ ಪಥ್ಯ ಆಹಾರವಾಗಿದೆ.
  8. ಇದರಲ್ಲಿರುವ ವಿಟಮಿನ್ ರೈಬೋಫ್ಲೇವಿನ್,ಪೆನತೋನಿಕ್ ಆಮ್ಲ, ಥೈಮಿನ್ ಅಂಶಗಳು ದೇಹದ ನರಮಂಡಲಗಳಿಗೆ ಉತ್ತಮ ಬಲವನ್ನು ನೀಡುತ್ತದೆ.
  9. ಗೋಡಂಬಿ ಬೀಜದ ಓಡಿನ ಎಣ್ಣೆಯು ಕಾಲಿನ ಹಿಮ್ಮಡಿ ಒಡೆಯುವುದನ್ನು ಕಡಿಮೆ ಮಾಡುತ್ತದೆ.
  10. ಓಡಿನ ಎಣ್ಣೆಯು ಕೆಡು,ಕಾಲಿನ ಆಣಿ ,ಹುಣ್ಣು ಇತ್ಯಾದಿಗಳನ್ನು ಕರಗಿಸುತ್ತದೆ.
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts