ಕಲ್ಲಡ್ಕದಲ್ಲಿರುವ ಶ್ರೀರಾಮಮಂದಿರದಲ್ಲಿ ಹನುಮಾನ್ ವಿಗ್ರಹ ಪ್ರತಿಷ್ಠೆ ಜೂನ್ 19ರಂದು ನಡೆಯಲಿದೆ.
ಮಂದಿರದ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಧ್ಯಾನ ಮಂದಿರ ಮತ್ತು 9ಅಡಿ 9ಇಂಚು 9ನೂಲು ಎತ್ತರದ ಹನುಮಾನ್ ವಿಗ್ರಹ ಪ್ರತಿಷ್ಟೆ ಅಂದು ನಡೆಯಲಿರುವುದು. ಬೆಳಿಗ್ಗೆ 7 ರಿಂದ ಗಣಪತಿಹವನ, ಪ್ರತಿಷ್ಠಾಹವನ, 9.10 ಕ್ಕೆ ಹನೂಮಾನ್ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ, ಪಂಚಾಮೃತಾಭೀಷೇಕ, ಕಲ್ಪೋಕ್ತ ಪೂಜೆ ನಡೆಯಲಿದೆ.
ಅದಾದ ಬಳಿಕ ಬೆಳಗ್ಗೆ 10ಕ್ಕೆ ಸಭಾಕಾರ್‍ಯಕ್ರಮ, *ಧರ್ಮಕೇಸರೀ ಸಭಾ* ನಡೆಯುವುದು. ಈ ಸಂದರ್ಭ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡುವರು.
ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಸುರೇಶ್ ಶೆಟ್ಟಿ ಗುರ್ಮೆ ಉದ್ಯಮಿಗಳು ಇವರು ಉಪಸ್ಥಿತರಿರುವರು.
10.30 ಕ್ಕೆ ಸಾರ್ವಜನಿಕ ಸಿಯಾಳಾಭಿಷೇಕ, ನಿರಂತರ ಭಜನೆ, 12.30 ರಿಂದ ಅನ್ನಸಂತರ್ಪಣೆ ಹಾಗೂ ಸಂಜೆ 5 ರಿಂದ ತಿಲತೈಲಾಭಿಷೇಕ, ಅಲಂಕಾರ, ಭಜನಾ ಮಂಗಳ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿರುವುದು ಎಂದು ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…