ನಿರ್ಮಾಣ ಹಂತದಲ್ಲಿರುವ ಕೆಎಸ್ಆರ್ಟಿಸಿ ನೂತನ ಬಸ್ ನಿಲ್ದಾಣದ ಮುಂಭಾಗ ರಾಷ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ಶುಕ್ರವಾರ ರಾತ್ರಿ ರಸ್ತೆ ವಿಭಜನೆ ಮಾಡಿದೆ. ಇದೀಗ ಫ್ಲೈಓವರ್ ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಗೊಂದಲಕ್ಕೆ ಕಾರಣವಾಗಿದೆ.
ಅಜ್ಜಿಬೆಟ್ಟು ರಸ್ತೆಯ ನಾಗರಿಕರಿಗೆ ಮತ್ತು ವಾಹನಗಳು ತಿರುವ ಪಡೆಯಲೆಂದು ಡಿವೈಡರ ಮಧ್ಯೆ ಸ್ಥಳಾವಕಾಶ ಕಲ್ಲಿಸಲಾಗಿದ್ದು, ಅದೇ ಜಾಗದ ಸುತ್ತ ಶುಕ್ರವಾರ ಸಂಜೆ ಹಠಾತ್ತನೆ ರಸ್ಥೆ ವಿಭಾಜಕ ಕೋನ್ ಗಳನ್ನು ಅಳವಡಿಸಲಾಯಿತು. ಇದರಿಂದ ಎರಡೂ ಕಡೆಯಿಂದ ಸಂಚರಿಸುವ ವಾಹನ ಸವಾರರು ಗೊಂದಲಕ್ಕೆ ಸಿಲುಕಿ ಪರಾದಾಡಿದರು.
ಮಂಗಳೂರು ಕಡೆಯಿಂದ ಬರುವಂತ ಬಸ್ , ಲಾರಿ ಸಹಿತ ಎಲ್ಕಾಲಾ ಘನವಾಹನಗಳು ಇಲ್ಲಿ ಬಲಕ್ಕೆ ತಿರುಗಿ ಮೇಲ್ಸತುವೆಯ ಮೂಲಕ ಸಂಚರಿಸುವಂತೆ ಸೂಚನಾಫಲಕ ಹಾಕಲಾಗಿದೆ. ಹಾಗೆಯೇ ಎದುರು ಕಡೆಯಿಂದ ಬರುವ ವಾಹನಗಳು ಎಡಭಾಗದಿಂದಲೇ ನೇರವಾಗಿ ತೆರಳಬೇಕು ಎಂದು ಸೂಚನಾ ಫಲಕದಲ್ಲಿ ತಿಳಿಸಲಾಗಿದೆ.
ಇದೀಗ ಇಲ್ಲಿ ವಾಹನ ಸವಾರರು ತಿರುವ ಪಡೆಯಲು ಮುಂದೆ ಪರದಾಟ ನಡೆಸಬೇಕು. ವಿಭಾಜಕ ಕೋನ್ ಮಧ್ಯೆ ತೂರಿಕೊಂಡು ಹೋಗಬೇಕಾಗಿದೆ. ಈ ಸಂದರ್ಭ ಮಂಗಳೂರು ಕಡೆಯಿಂದ ಬರುವ ಘನ ವಾಹನಗಳು ಬಲಕ್ಕೆ ತೆಗೆದುಕೊಳ್ಳುವ ವೇಳೆ ಅಪಾಯ ಗ್ಯಾರಂಟಿ.
ರಾತ್ರಿ ವೇಳೆಯಲ್ಲಂತು ಈ ವ್ಯವಸ್ಥೆ ಇನ್ನಷ್ಠು ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗೆ ಸಂಚರಿಸುವ ಬಸ್ ಮತ್ತಿತರ ಘನ ವಾಹನಗಳ ಸಂಚಾರದ ಭರಾಟೆಗೆ ವಿಭಾಜಕ ಕೋನ್ ಗಳು ನೆಲಸಮವಾದರೂ ಅಚ್ಚರಿಪಡಬೇಕಾಗಿಲ್ಲ.
ಬಿ.ಸಿ.ರೋಡಿಗೆ ಅಗತ್ಯವಿಲ್ಲದ ಮೇಲ್ಸತುವೆ ನಿರ್ಮಾಣವಾದಂದಿನಿಂದ ಒಂದಲ್ಲೊಂದು ಸಮಸ್ಯೆ, ಎಡವಟ್ಟುಗಳನ್ನು ರಾಹೆ.ಪ್ರಾ.ಇಲಾಖೆ ಮೈಮೇಲೆ ಎಳೆದುಕೊಂಡಿದೆ. ಅಗತ್ಯವಾಗಿ ಅಗಬೇಕಾದ ಸರ್ವಿಸ್ ರಸ್ತೆ ದುರಸ್ಥಿಯನ್ನು ಮಾಡದ ರಾ.ಹೆ.ಪ್ರಾ.ಇದೀಗ ಮತ್ತೊಂದು ಅಪಾಯಕಾರಿ ಸನ್ನಿವೇಶವನ್ನು ಸ್ರಷ್ಟಿಸಿದೆ.