ಓಮ ಅಥವಾ ಅಜಮೋದ ತೀಕ್ಹ್ನ ಸುಗಂಧ ದ್ರವ್ಯವಾಗಿದ್ದು ಇದನ್ನು ಕಿಂಚಿತ್ ಪ್ರಮಾಣದಲ್ಲಿ ಬಳಸುವುದರಿಂದ ಪದಾರ್ಥದ ರುಚಿ ,ಪರಿಮಳ ಹಾಗು ಅದರ ಪ್ರಭಾವ ತಿಳಿಯುತ್ತದೆ. ಹಾಗೆಯೇ ಓಮವು ತ್ರಿದೋಷ ಶಾಮಕವಾಗಿದ್ದು ವದ್ಯಕೀಯ ಕ್ಷೆತ್ರಲ್ಲೂ ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ.
ಓಮವನ್ನು ಗೋಮೂತ್ರದಲ್ಲಿ ಅರೆದು ಬಾವು ಇರುವ ಜಾಗಕ್ಕೆ ಲೇಪಿಸಿದರೆ ನೋವು ಹಾಗು ಊತ ಕಡಿಮೆಯಾಗುತ್ತದೆ.
ಒಮವನ್ನು ಎಳ್ಳೆಣ್ಣೆಯೊಂದಿಗೆ ಹಾಕಿ ಕುದಿಸಿ ಶರೀರಕ್ಕೆ ಹಾಕಿ ಉಜ್ಜುವುದರಿಂದ ಶರೀರದ ಕಪ ಕಡಿಮೆಯಾಗುತ್ತದೆ ಮತ್ತು ನೋವುಗಳು ನಿವಾರಣೆಯಾಗುತ್ತದೆ.
ಒಮವನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಆಮವಾತ ,ಸಂಧುವಾತ, ವಾತರಕ್ತ ಇತ್ಯಾದಿ ವಾತ ಸಂಬಂಧಿ ವ್ಯಾಧಿಗಳು ಕಡಿಮೆಯಾಗುತ್ತದೆ.
ಬಾಯಿ ದುರ್ಗಂಧಪೂರಿತವಾಗಿದ್ದರೆ ಸ್ವಲ್ಪ ಓಮವನ್ನು ಬಾಯಿಗೆ ಹಾಕಿ ಜಗಿಯಬೇಕು. ಇದರಿಂದ ಬಾಯಿ ರುಚಿಯೂ ಸಹ ಅಧಿಕವಾಗುತ್ತದೆ
ಓಮ ಮತ್ತು ಅರಳಿನ ಹುಡಿಯನ್ನು ಜೇನುತುಪ್ಪದಲ್ಲಿ ಕಲಸಿ ತಿನ್ನುವುದರಿಂದ ಭೇದಿಯ ಸಮಸ್ಯೆ ನಿವಾರಣೆಯಾಗುತ್ತದೆ.
ಒಮವನ್ನು ನೀರಿನಲ್ಲಿ ಕಲಸಿ ತೆಳ್ಳಗಿನ ಬಟ್ಟೆಯಮೇಲೆ ಲೇಪಿಸಿ ಕಣ್ಣಿನ ಮೇಲೆ ಇಟ್ಟರೆ ಕಣ್ಣಿನ ನೋವು, ರೆಪ್ಪೆಯ ಕುರ ಇತ್ಯಾದಿಗಳು ವಾಸಿಯಾಗುತ್ತದೆ.
ಗಂಟಲು ನೋವು ಇದ್ದಾಗ ಒಮದ ಕಷಾಯದಲ್ಲಿ ಬಾಯಿ ಮುಕ್ಕಳಿಸಬೇಕು.
ಸ್ವರ ಬಿದ್ದುಹೋದಾಗ ಒಮವನ್ನು ತುಪ್ಪದಲ್ಲಿ ಕಲಸಿ ನೆಕ್ಕಬೇಕು.
ಹೊಟ್ಟೆ ಉಬ್ಬರಿಸುವುದು ಮತ್ತು ನೋವು, ಅಜೀರ್ಣ ಇದ್ದಾಗ ಒಮವನ್ನು ತುಪ್ಪದಲ್ಲಿ ಹುರಿದು ತಿನ್ನಬೇಕು.
ಹೊಟ್ಟೆಯ ಹುಳದ ಬಾಧೆ ಇದ್ದಾಗ ಒಮದ ಕಷಾಯ ಕುಡಿಯಬೇಕು.
ಒಮದ ಜೊತೆ ಸ್ವಲ್ಪ ತುಳಸಿ ಮತ್ತು ಅರಸಿನ ಹಾಕಿ ಕಷಾಯ ಮಾಡಿ ಕುಡಿದರೆ ಜ್ವರ, ಶೀತ ನೆಗಡಿ ಇತ್ಯಾದಿಗಳು ಕಡಿಮೆಯಾಗುತ್ತದೆ.
ಬಿಕ್ಕಳಿಕೆಯ ತೊಂದರೆ ಇದ್ದಾಗ ಸ್ವಲ್ಪ ಓಮ ಮತ್ತು ಜೀರಿಗೆಯನ್ನು ಪುಡಿಮಾಡಿ ತುಪ್ಪದಲ್ಲಿ ಕಲಸಿ ನೆಕ್ಕಬೇಕು. ಇದನ್ನು ವಾಕರಿಕೆಯ ಸಂದರ್ಭದಲ್ಲೂ ಸಹ ಉಪಯೋಗಿಸ ಬಹುದು.
ಓಮವು ಗರ್ಭಾಶಯವನ್ನು ಸಂಕುಚಿತಗೊಳ್ಳಲು ಸಹಕರಿಸುತ್ತದೆ.ಆದುದರಿಂದ ಮುಟ್ಟಿನ ಸಮಯದ ಹೊಟ್ಟೆನೋವಿಗೆ ಇದು ದಿವ್ಯ ಔಷಧಿ.(ಗರ್ಭಿಣಿಯರು ಸೇವಿಸಬಾರದು)
ಮೈ ಮೇಲೆ ಹುಳ ಕಜ್ಜಿ ಇದ್ದಾಗ ಒಮವನ್ನು ಪುಡಿಮಾಡಿ ಗೋಮೂತ್ರದಲ್ಲಿ ಕಲಸಿ ಹಚ್ಕಾಬೇಕು. ಇದರಿಂದ ತುರಿಕೆ ಹಾಗು ಕಜ್ಜಿ ಕಡಿಮೆಯಾಗುತ್ತದೆ.
ಓಮವು ಶರೀರದ ನಂಜು ನಿವಾರಕವಾಗಿದ್ದು ಪಿತ್ತ ಜನಕಾಂಗವನ್ನು ರಕ್ಷಿಸುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ಇದು ಶರೀರದ ಕೊಬ್ಬನ್ನು ಕರಗಿಸಲು, ರಕ್ತದ ಒತ್ತಡವನ್ನು ಹತೋಟಿಯಲ್ಲಿ ಇಡಲು ಮತ್ತು ಹ್ರುದ್ರೋಗವನ್ನು ತಡೆಯಲು ಸಹಕರಿಸುತ್ತದೆ
ಒಮದ ಕಷಾಯವನ್ನು ಕುಡಿಯುವುದರಿಂದ ಮೂತ್ರ ಪ್ರವೃತ್ತಿ ಸರಿಯಾಗಿ ಆಗುತ್ತದೆ.
Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.