ಬಂಟ್ವಾಳ ಪುರಸಭೆ , ಲಯನ್ಸ್ ಕ್ಲಬ್ ಬಂಟ್ವಾಳ, ಸ್ವಚ್ಛ ಬಂಟ್ವಾಳ ಮತ್ತು ಟೀಮ್ ವಿವೇಕ್ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ರಾಮಕೃಷ್ಣ ಮಿಷನ್ ಸ್ವಚ್ಛ ಬಂಟ್ವಾಳ ಆಂದೋಲನದಡಿಯಲ್ಲಿ ಪರಿಸರ ಜಾಗೃತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಧರ್ಮವ್ರತಾನಂದ ಜಿ ಮಾತನಾಡುತ್ತಾ ಸ್ವಚ್ಛತೆ ಎಂಬುದು ವೈಯ್ಯಕ್ತಿಕ ಮಟ್ಟದಲ್ಲಿ ಪ್ರಾರಂಭವಾಗಬೇಕು ಮತ್ತು ಜೀವಂತವಾಗಬೇಕು. ಸ್ವಚ್ಛತೆ ನಮ್ಮ ಜವಾಬ್ದಾರಿ ಎಂಬುದನ್ನು ಮರೆತಿರುವುದಕ್ಕೆಯೇ ಇಂದು ಪ್ರಧಾನಿಗಳು ಸ್ವಚ್ಛತೆಯನ್ನು ಅಭಿಯಾನದಂತೆ ಕೈಗೆತ್ತಿಕೊಂಡಿದ್ದಾರೆ ಮತ್ತು ಅದಕ್ಕೆ ರಾಮಕೃಷ್ಣ ಮಠ ಸಾಥ್ ನೀಡುತ್ತಾ ಬಂದಿದೆ . ಗ್ರಾಮೀಣ ಮಟ್ಟದಿಂದಲೇ ಆಡಳಿತಾತ್ಮಕವಾಗಿ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದರೆ ಸ್ವಚ್ಛ ಭಾರತ ಕನಸ್ಸನ್ನು ನನಸಾಗಲು ಸಾಧ್ಯ . ಆದ್ದರಿಂದ ನಾವೆಲ್ಲರೂ ಸ್ವಚ್ಛತೆ ನಮ್ಮ ಕರ್ತವ್ಯವೆಂದು ತಿಳಿದು ದೇಶವನ್ನು ಸ್ವಚ್ಛವಾಗಿಡಲು ದಿಟ್ಟ ಹೆಜ್ಜೆ ಇಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಷ್ಟೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ ಮಾತನಾಡಿ ಪಶ್ಚಿಮ ಘಟ್ಟಗಳ ಪ್ರಾಮುಖ್ಯತೆ ಮತ್ತು ಅದರ ಉಳಿವಿಗಾಗಿ ಅಗತ್ಯವಿರುವ ಹೋರಾಟದ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದರು.
ಬಿ.ಮೂಡ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಜಾಕ್ ಮಾತನಾಡಿ ನೀರಿನ ಮಿತಯುತ ಬಳಕೆಯ ಅವಶ್ಯಕತೆಯ ಬಗ್ಗೆ ಮತ್ತು ಪುರಸಭೆ ಆಯೋಜಿಸಿದ್ದ ನಿರ್ಮಲ ಬಂಟ್ವಾಳ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುರಸಭೆ ಅಧ್ಯಕ್ಷರಾದ ರಾಮಕೃಷ್ಣ ಆಳ್ವ ಅಧ್ಯಕ್ಷೀಯ ನುಡಿಗಳಾಡಿದರು . ಬಂಟ್ವಾಳ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಸದಾಶಿವ ಬಂಗೇರ, ಮುಖ್ಯಾಕಾರಿ ಎಂ.ಎಚ್.ಸುಧಾಕರ್, ಉಪನ್ಯಾಸಕ ಪ್ರೊ. ತುಕರಾಮ್ ಪೂಜಾರಿ, ಸುಂದರ್ ರಾವ್, ರಾಜಶೇಖರ್ ಹೆಬ್ಬಾರ್, ಸುರೇಂದ್ರ ಶಣ್ಯ , ವಿನಾಯಕ್ ಪೈ, ಅರ್ಜುನ್ ಪೈ, ವಿವಿದ ಸಂಘಟನೆಗಳ ಪದಾಕಾರಿಗಳು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)