ವಿಟ್ಲ

ಉತ್ತಮ ಶಾಲೆಯ ಆಯ್ಕೆ ಪೋಷಕರ ಕರ್ತವ್ಯ: ಶಾಲಾ ಆರಂಭೋತ್ಸವದಲ್ಲಿ ಒಡಿಯೂರು ಶ್ರೀ

ಬದುಕು ಸಮರಸದಿಂದಿರಬೇಕಾದರೆ ಅರಿವಿರಬೇಕು. ಮಕ್ಕಳಲ್ಲಿ ಅರಿವು ಮೂಡಬೇಕಾದರೆ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮಹತ್ತರವಾದುದು. ವಿದ್ಯಾರ್ಥಿಗಳೆಂದರೆ ಚಲಾವಣೆಯಲ್ಲಿರುವ ನಾಣ್ಯ. ಪೋಷಕರು-ಶಿಕ್ಷಕರು ಈ ನಾಣ್ಯದ ಎರಡು ಮುಖಗಳು. ಉತ್ತಮ ಶಾಲೆಯನ್ನು ಆಯ್ಕೆ ಮಾಡುವುದು ಪೋಷಕರ ಕರ್ತವ್ಯ. ಆ ಶಾಲೆಯಲ್ಲಿ ಮಕ್ಕಳನ್ನು ಸತ್ಪ್ರಜೆಗಳಾನ್ನಾಗಿಸುವುದು ಶಿಕ್ಷಕರ ಕರ್ತವ್ಯವಾಗಿದೆ. ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಜಾಹೀರಾತು

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾಸಂಸ್ಥೆಗಳ ೨೦೧೭-೧೮ರ ಶೈಕ್ಷಣಿಕ ವರ್ಷದ ಶಾಲಾ ಆರಂಭೋತ್ಸವ-ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

. ಆ ಮೂಲಕ ನಾಣ್ಯ ಎಂಬ ವಿದ್ಯಾರ್ಥಿ ಚಲಾವಣೆಯಾಗುವುದಕ್ಕೆ ಸಾಧ್ಯ. ರಾಷ್ಟ್ರನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರವೇನು ಎಂಬುದನ್ನು ವಿಮರ್ಶಿಸಬೇಕು. ರಾಷ್ಟ್ರಸೇವೆಗೆ ಮನವನ್ನು ಮಾಡುವುದರೊಂದಿಗೆ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ಸದ್ಗುಣ ಸದಾಚಾರ ಸಂಪನ್ನರಾಗಿದ್ದು ಉತ್ತಮ ವಿದ್ಯಾರ್ಥಿಗಳಾಗಬೇಕು. ಉತ್ತಮ ಶಿಕ್ಷಕರೂ ಆಗಬೇಕು. ಹಿರಿಯರನ್ನು ಗೌರವಿಸುವ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪೂರಕವಾದ ವಿಚಾರಗಳನ್ನು ತಿಳಿಸಬೇಕು. ಆದರ್ಶ ಶಿಕ್ಷಣ ಸಂಸ್ಥೆಯಾಗುವಲ್ಲಿ ನಿಮ್ಮೆಲ್ಲರ ಶ್ರಮ, ಪೋಷಕರ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ ಪ್ರಯತ್ನಪಟ್ಟರೆ ಶ್ರೇಯಸ್ಸನ್ನು ಪಡೆಯಬಹುದು. ಒಳ್ಳೆಯ ಗುಣ, ಸ್ವಚ್ಛತೆ-ಶಿಸ್ತನ್ನು ನಮ್ಮಲ್ಲಿ ರೂಢಿಸಿಕೊಳ್ಳಬೇಕು. ಪೂಜ್ಯ ಶ್ರೀಗಳವರ ಕೃಪಾಶೀರ್ವಾದ, ದಾನಿಗಳ ಸಹಕಾರ, ಶಿಕ್ಷಕರ ಶ್ರಮ, ಪೋಷಕರ ಪ್ರೋತ್ಸಾದಿಂದ ಸಂಸ್ಥೆಯು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಈ ಸಮಾರಂಭದಲ್ಲಿ ಪೋಷಕರ ಪಾಲ್ಗೊಳ್ಳುವಿಕೆಗೆ ಸಂತಸವಾಗಿದೆ ಎಂದರು.

ಜಾಹೀರಾತು

ಸಮಾರಂಭದಲ್ಲಿ ೨೦೧೬-೧೭ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಶ್ರೀ ಸಂಸ್ಥಾನದಿಂದ ಶ್ರೀಗಳವರು ಗೌರವಿಸಿ ಹರಸಿದರು.      ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಮುಖ್ಯೋಪಾಧ್ಯಾಯರಾಗಿ ೧೬ ವರ್ಷಗಳಿಂದ ಸೇವೆಸಲ್ಲಿಸಿ ನಿವೃತ್ತರಾದ ಅಮೈ ಕೃಷ್ಣ ಭಟ್ ಮತ್ತು ಇತ್ತೀಚೆಗೆ ಕೆಲವು ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ            ಲೋಹಿತ್ ಭಂಡಾರಿ, ಗುರುಕುಲದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಸವಿತಾಲಕ್ಷ್ಮೀ, ಕಛೇರಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ ಅಸ್ತಿಕಾ ರೈ ಇವರನ್ನು ಶ್ರೀಗಳವರು ಗೌರವಿಸಿ ಫಲಮಂತ್ರಾಕ್ಷತೆಯಿತ್ತು ಹರಸಿದರು.

ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರವನ್ನೂ ವಿತರಿಸಲಾಯಿತು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮಂಗಳೂರು ವಲಯದ ವತಿಯಿಂದ ನೀಡಿದ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು. ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಒಡಿಯೂರು ಇದರ ವತಿಯಿಂದ ೧ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಿದರು.

ಪಿ.ಆರ್. ಶೆಟ್ಟಿ ಪೊಯ್ಯೆಲು, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಂಗಳೂರು ವಲಯದ ಅಧ್ಯಕ್ಷ ಶ್ರೀ ಜಯಂತ ಜೆ. ಕೋಟ್ಯಾನ್, ಉಪಾಧ್ಯಕ್ಷ ಶ್ರೀ ವೇಣುಗೋಪಾಲ ಮಾರ್ಲ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕರುಗಳಾದ ಎಚ್.ಕೆ. ಪುರುಷೋತ್ತಮ, ಬಿ.ಕೆ. ಚಂದ್ರಶೇಖರ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಯಶವಂತ್ ವಿಟ್ಲ, ಒಡಿಯೂರು ಶ್ರೀ ಗುರುದೇವ ಐ.ಟಿ.ಐ. ಕನ್ಯಾನ ಪ್ರಾಚಾರ್ಯರಾದ ಸುಬ್ರಹ್ಮಣ್ಯ ಎಸ್. ಉಪಸ್ಥಿತರಿದ್ದು ಶುಭಹಾರೈಸಿದರು.

ಜಾಹೀರಾತು

ಶಾಲಾ ಮಕ್ಕಳ ಪ್ರಾರ್ಥನಾಗೀತೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಶಾಲಾ ಸಂಚಾಲಕ ಸೇರಾಜೆ ಗಣಪತಿ ಭಟ್ ಸ್ವಾಗತಿಸಿ, ವಂದಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದಜಯಪ್ರಕಾಶ್ ಶೆಟ್ಟಿ ಇವರು ೨೦೧೬-೧೭ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ನವಿತಾ ವಂದಿಸಿದರು. ೯ನೇ ತರಗತಿಯ ವಿದ್ಯಾರ್ಥಿನಿ ಶರಣ್ಯ ಕಾರ್ಯಕ್ರಮ ನಿರೂಪಿಸಿದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ