ತೊಗರಿ ಬೇಳೆಯು ಪದಾರ್ಥಗಳಿಗೆ ಸಾಂದ್ರತೆ ಮತ್ತು ರುಚಿಯನ್ನು ನೀಡುವ ದ್ವಿದಳ ಧಾನ್ಯ. ಇದು ಶರೀರದಲ್ಲಿ ಕಪ ಹಾಗು ಪಿತ್ತವನ್ನು ಶಮನಗೊಳಿಸುತ್ತದೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ವಾತವನ್ನು ವೃದ್ಧಿ ಮಾಡುತ್ತದೆ.

  1. ಚಿಕ್ಕ ಮಕ್ಕಳಲ್ಲಿ ಮಲವಿಸರ್ಜನೆ ಮಾಡುವಾಗ ಗಡ್ಡೆ ಹೊರ ಬರುವುದಿದ್ದರೆ ತೊಗರಿ ಬೇಳೆಯನ್ನು ನೀರಿನಲ್ಲಿ ನೆನೆ ಹಾಕಿ ಚೆನ್ನಾಗಿ ಅರೆದು ತೆಳ್ಳಗಿನ ಬಟ್ಟೆಯಲ್ಲಿ ಲೇಪಿಸಿ ಗುದದ್ವಾರಕ್ಕೆ ಬಿಗಿಯಾಗಿ ಕಟ್ಟಬೇಕು.
  2. ತೊಗರಿ ಬೇಳೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಶರೀರದ ಅಧಿಕ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ.
  3. ಪಾದ ಹಾಗು ಅಂಗೈಯಲ್ಲಿ ಉರಿ ಇದ್ದಾಗ ತೊಗರಿ ಬೇಳೆಯನ್ನು ಅರೆದು ಲೇಪಿಸಬೇಕು
  4. ಕಣ್ಣುಗಳಲ್ಲಿ ಉರಿ ಹಾಗು ಕಣ್ಣು ಕೆಂಪು ಆದಾಗ ತೊಗರಿಬೇಳೆಯನ್ನು ನೀರಿನಲ್ಲಿ ನೆನೆಹಾಕಿ ಆ ನೀರನ್ನು ಕಣ್ನಿಗೆ ಬಿಡಬೇಕು.
  5. ಸುಟ್ಟ ಗಾಯಗಳ ಮೇಲೆ ತೊಗರಿಬೇಳೆಯನ್ನು ಅರೆದು ಲೇಪಿಸುವುದರಿಂದ ಉರಿ ಬೇಗನೆ ಕಡಿಮೆಯಾಗುತ್ತದೆ.
  6. ತೊಗರಿ ಬೇಳೆಯು ಪಿತ್ತಕೋಶಕ್ಕೆ ಬಲದಾಯಕವಾಗಿದ್ದು ಮಧ್ಯಪಾನಿಗಳಲ್ಲಿ ಇದು ಉತ್ತಮ ಪಥ್ಯಾಹಾರವಾಗಿದೆ.
  7. ತೊಗರಿ ಬೇಳೆಯು ಮೂತ್ರ ಕೋಶದ (kidney )ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ ಇಲ್ಲಿ ತೊಗರಿಬೇಳೆಯನ್ನು ಬೇಯಿಸಿ ಅದರ ನೀರನ್ನು ದಿನಕ್ಕೆ 200 ಮಿ.ಲೀ ಗೆ ಕಡಿಮೆ ಆಗದಂತೆ ಸೇವಿಸಬೇಕು.
  8. ಅಜೀರ್ಣಯುಕ್ತ ಭೇದಿ ಇದ್ದಾಗ ತೊಗರಿ ಬೇಳೆಯ ಕಷಾಯವನ್ನು ಹಾಗೆಯೇ ಅಥವಾ ಮಜ್ಜಿಗೆಯೊಂದಿಗೆ ಸೇವಿಸಬೇಕು.
  9. ತೊಗರಿ ಬೇಳೆಯನ್ನು ಉಪಯೋಗಿಸುವುದರಿಂದ ರಕ್ತ ವಿಕಾರಗಳು ನಿವಾರಣೆಯಾಗುತ್ತದೆ.
  10. ತೊಗರಿಬೇಳೆಯನ್ನು ಹಾಲಿನಲ್ಲಿ ಅರೆದು ಮುಖಕ್ಕೆ ಲೇಪಿಸುವುದರಿಂದ ಪಿತ್ತ ಪ್ರಧಾನವಾದ ಮೊಡವೆಗಳು ವಾಸಿಯಾಗುತ್ತದೆ
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts