ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹಾಗೂ ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ಅಳವಡಿಸಿರುವ ಬ್ಯಾನರನ್ನು ಕಿಡಿಗೇಡಿಗಳು ರಾತೋರಾತ್ರಿ ಹರಿದು ಹಾಕಿದ್ದಾರೆ ಎಂದು ಆಪಾದಿಸಲಾಗಿದೆ.
ಎರಡೂ ಗ್ರಾಮ ಪಂಚಾಯತುಗಳ ಅಧ್ಯಕ್ಷರುಗಳು ಪಂಚಾಯತ್ ಪಿಡಿಒ ಅವರಿಂದ ಪರವಾನಿಗೆ ಪಡೆದು ಶುಭ ಕೋರುವ ಬ್ಯಾನರ್ ಶನಿವಾರ ಬೆಳಿಗ್ಗೆ ಹಾಕಿದ್ದರು. ಅದೇ ದಿನ ರಾತ್ರಿಯಾಗುತ್ತಲೇ ಈ ಬ್ಯಾನರ್ ದುಷ್ಕರ್ಮಿಗಳ ಕತ್ತರಿ ಪ್ರಯೋಗಕ್ಕೊಳಗಾಗಿದೆ. ಸಜಿಪಮೂಡ ಗ್ರಾ ಪಂ ಅಧ್ಯಕ್ಷ ಗಣಪತಿ ಭಟ್ ಹಾಗೂ ಸಜಿಪಮುನ್ನೂರು ಗ್ರಾ ಪಂ ಅಧ್ಯಕ್ಷ ಶರೀಫ್ ನಂದಾವರ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ಬ್ಯಾನರ್ ವಿರೂಪಗೊಳಿಸಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಚಿವರು ಹಾಗೂ ಜಿ ಪಂ ಸದಸ್ಯರ ಅಭಿವೃದ್ದಿ ಕಾರ್ಯಗಳ ಶುಭಾಶಯ ಬ್ಯಾನರ್ ಹರಿದು ಹಾಕಿದ್ದನ್ನು ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ ಖಂಡಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…