ಸರಕಾರ ಶಿಕ್ಷಣಕ್ಕೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮಕ್ಕಳನ್ನು ವಿದ್ಯಾವಂತರನ್ನಾಗಿಸಲು ಹೆತ್ತವರೂ ಶ್ರಮಿಸುತ್ತಿದ್ದಾರೆ. ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯುವುದು ಅಗತ್ಯ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳದಲ್ಲಿ ಪುರಸಭಾ ಸದಸ್ಯ ಬಿ.ಪ್ರವೀಣ್ ನೇತೃತ್ವದಲ್ಲಿ ಏರ್ಪಡಿಸಲಾದ ಉಚಿತ ಪುಸ್ತಕ ವಿತರಣೆ ಸಂದರ್ಭ ಮಾತನಾಡಿದ ಅವರು, ಇಂದು ವಿದ್ಯೆಗೆ ಹೆಚ್ಚಿನ ಮಹತ್ವ ಇದ್ದು, ಉತ್ತಮ ಪ್ರಯೋಜನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರೊ. ತುಕಾರಾಮ ಪೂಜಾರಿ, ಇಂದು ವೈದ್ಯ ಮತ್ತು ತಾಂತ್ರಿಕ ಶಿಕ್ಷಣದತ್ತಲೇ ಪೋಷಕರು ಗಮನಹರಿಸುತ್ತಿದ್ದಾರೆ. ಆದರೆ ವಿವಿಧ ರಂಗಗಳಿಗೂ ಗಮನ ಹರಿಸಬಹುದು ಎಂದು ಹೇಳಿದರು.
ಅತಿಥಿಗಳಾಗಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶವ ಬಂಗೇರ, ಕಾರ್ಮಿಕ ಮುಖಂಡ ಸಂಜೀವ ಬಂಗೇರ, ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಜನಾರ್ದನ ಚಂಡ್ತಿಮಾರ್, ಮೆಸ್ಕಾಂ ಬಂಟ್ವಾಳ ಶಾಖೆಯ ಸಲಹಾಸಮಿತಿ ಸದಸ್ಯ ಎಂ.ವೆಂಕಪ್ಪ ಪೂಜಾರಿ, ಹೊಸ್ಮಾರ್ ಫ್ರೆಂಡ್ಸ್ ಅಧ್ಯಕ್ಷ ಸೋಮಪ್ಪ ಪೂಜಾರಿ, ಪುರಸಭಾ ಸದಸ್ಯ ಗಂಗಾಧರ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಜಗನ್ನಾಥ ತುಂಬೆ ಮೊದಲಾದವರು ಉಪಸ್ಥಿತರಿದ್ದರು. ಪುರಸಭಾ ಸದಸ್ಯ ಪ್ರವೀಣ್ ಸ್ವಾಗತಿಸಿದರು. ಜಯಪ್ರಕಾಶ್ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
for Video Report Click: