ವಿಟ್ಲದ ಮೇಗಿನಪೇಟೆಯಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ “ಅಲ್ ಖೈರ್ ವುಮೆನ್ಸ್ ಕಾಲೇಜಿನ(ಶರೀಯತ್) ನೂತನ ಕಚೇರಿ ಭಾನುವಾರ ಉದ್ಘಾಟನೆ ಗೊಂಡಿತು.
ಕೂರ್ನಡ್ಕ ಜುಮಾ ಮಸೀದಿ ಖತೀಬು ಅಬೂಬಕ್ಕರ್ ಸಿದ್ದಿಕ್ ಜಲಾಲೀ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಸಮುದಾಯದ ಹೆಣ್ಣು ಮಕ್ಕಳು ಧಾರ್ಮಿಕ ಶಿಕ್ಷಣ ಪಡೆದು ಅಲ್ಲಾಹನ ಮಾರ್ಗದಲ್ಲಿ ತೆರಳುವ ಒಂದೇ ಒಂದು ಉದ್ದೇಶ ಇಟ್ಟುಕೊಂಡು ಈ ಕಾಲೇಜು ಪ್ರಾರಂಭಿಸಲಾಗಿದೆ. ಒಂದು ಹೆಣ್ಣು ಕಲಿತಾಗ ಇಡೀ ಕುಟುಂಬ ಕಲಿತಂತೆ. ನಮ್ಮ ಊರಿನ ಹೆಣ್ಣು ಮಕ್ಕಳು ಧಾರ್ಮಿಕ ಶಿಕ್ಷಣದ ಮೂಲಕ ಇಸ್ಲಾಮಿನ ಆದರ್ಶನಗಳನ್ನು ಮೈಗೂಡಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಊರಿನ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇದು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಕೇಂದ್ರ ಜುಮಾ ಮಸೀದಿ ಖತೀಬು ಮೂಸಲ್ ಫೈಝಿ ದುವಾಃ ಆಶೀರ್ವಚನ ನೀಡಿದರು.
ಅಬೂಬಕ್ಕರ್ ನೋಟರಿ ವಿಟ್ಲ, ಜುಬೈರ್ ಮಾಸ್ಟರ್ ಮಾತನಾಡಿದರು.
ಕಾಲೇಜಿನ ಶಿಕ್ಷಕರಾದ ಹಕೀಂ ಅರ್ಶದಿ, ಇಮ್ರಾನ್ ಹುದವಿ, ಹೊರೈಝನ್ ಪಬ್ಲಿಕ್ ಸ್ಕೂಲ್‌ನ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಮೇಗಿನಪೇಟೆ, ಇಬ್ರಾಹಿಂ ಏರ್ ಸೌಂಡ್ಸ್, ಇಬ್ರಾಹಿಂ ಹಾಜಿ ಪೊನ್ನೋಟ್ಟು, ಮುಸ್ತಫಾ ಖಲೀಲ್, ಮಹಮ್ಮದ್ ಎ.ಎಸ್ ಮಾರ್ಟ್ ಮೊದಲಾದವರು ಉಪಸ್ಥಿತರಿದ್ದರು. ಸಫ್ವಾನ್ ಮಹಮ್ಮದ್ ವಿಟ್ಲ ಸ್ವಾಗತಿಸಿದರು. ಮಹಮ್ಮದ್ ಅಲಿ ವಿಟ್ಲ ವಂದಿಸಿದರು.