ಕಳೆದ ಮೂರು ವರ್ಷದಲ್ಲಿ ಭ್ರಷ್ಟಾಚಾರ ರಹಿತ, ದಕ್ಷ ಆಡಳಿತ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಪ್ರತಿಷ್ಟೆಯನ್ನು ಜಗತ್ತಿನಾದ್ಯಾಂತ ಪಸರಿಸಿದ್ದಾರೆ ಎಂದು ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ನೇತ್ರತ್ವದ ಕೇಂದ್ರ ಸರಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ ಶುಕ್ರವಾರ ಸಂಜೆ ಬಿ.ಸಿ.ರೋಡಿನಲ್ಲಿ ಆಯೋಜಿಸಿದ ಚಾಯ್ ಪೆ ಚರ್ಚಾ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
.ಈ ವರೆಗೆ ಒಂದು ರಜೆ ಪಡೆಯದೆ ದಿನದ 18 ತಾಸು ಕೆಲಸ ಟೀಕಾಕಾರರ ಬಾಯ್ಮುಚ್ಚಿಸಿದೆ ಎಂದ ಅವರು ಕರ್ನಾಟಕಕ್ಕೂ ಸುಮಾರು ೪೮ ಸಾವಿರ ಕೋ.ರೂ.ಕೇಂದ್ರ ಸರಕಾರ ನೀಡಿದ್ದು,ಕೇಂದ್ರದ ಅನುದಾನದಲ್ಲಾಗಿರುವ ಅಭಿವ್ರದ್ದಿ ಕಾಮಗಾರಿಗಳು ರಾಜ್ಯದ್ದೆ ಎಂದು ಬಿಂಬಿಸಿ ಇಲ್ಲಿ ತೆಂಗಿನಕಾಯಿ ಒಡೆಯಲಾಗುತ್ತಿದೆ ಎಂದು ಟೀಕಿಸಿದರು. ಮುಂದಿನವರ್ಷ ಕರ್ನಾಟಕ ವಿಧಾನ ಸಭೆಗೂ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದ ರಾಜೇಶ್ ನಾಯ್ಕ್ ತನ್ಮೂಲಕ ಕಾಂಗ್ರಸ್ ಮುಕ್ತ ಕರ್ನಾಟಕ ವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದರು.
ಸಾರ್ವಜನಿಕರಿಗೆ ಚಹಾ ವಿತರಿಸಿ ಕೇಂದ್ರ ಸರಕಾರದ ೩ ವರ್ಷ ಅವಧಿಯ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.
ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನ ಜಿ.ಕೆ.ಭಟ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ದೇಶದ ಶೇ.90 ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಜನರು ಮೆಚ್ಚಿದ್ದಾರೆ ಎಂದು ಮಾಧ್ಯಮಗಳು ಸಮೀಕ್ಷೆ ಮಾಡಿವೆ.ಪ್ರಧಾನಿಯವರ ರಾಜತಾಂತ್ರಿಕ ನಡೆನುಡಿಗೆ ತಕ್ಕಂತೆ ಅವರ ಸಂಪುಟದ ಸಚಿವರು ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ ಎಂದರು. ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಿಧ ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು ಕರ್ನಾಟಕಕ್ಕೂ ರಸ್ತೆ ಸಹಿತ ಮೂಲಭೂತ ಸೌಲಭ್ಯಕ್ಕಾಗಿ ಯಾವುದೇ ರಾಜಕೀಯ ತಾರತಮ್ಯ ವಿಲ್ಲದೆ ಸುಮಾರು ೪೮ಸಾವಿರ ಕೋ.ರೂ.ಅನುದಾನ ಬಿಡುಗಡೆ ಮಾಡಿದೆ.ಇದೇ ವೇಳೆ ಕರ್ನಾಟಕ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಕ್ಷೇತ್ರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಜಿಲ್ಲಾ ಕಾರ್ಯದರ್ಶಿ ಸುಗುಣ ಕಿಣಿ, ಕ್ಷೇತ್ರ ಪ್ರಧಾನಕಾರ್ಯದರ್ಶಿ ರಾಮದಾಸ್ ಬಂಟ್ವಾಳ್,ಮೋನಪ್ಪ ದೇವಸ್ಯ, ಕಾರ್ಯದರ್ಶಿಗಳಾದ ಸೀತಾರಾಮ ಪೂಜಾರಿ, ರಮನಾಥ ರಾಯಿ, ಗಣೇಶ್ ರೈ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುದರ್ಶನ್, ಕ್ಷೇತ್ರ ಮೋರ್ಚಾ ಪ್ರಮುಖರಾದ ತನಿಯಪ್ಪ ಗೌಡ, ಪುರುಷೋತ್ತಮ ಶೆಟ್ಟಿ, ವಸಂತ ಅಣ್ಣಳಿಕೆ, ದಿನೇಶ್ ಭಂಡಾರಿ, ಮಹಾಬಲ ಶೆಟ್ಟಿ, ಜಗದೀಶ ಭಂಡಾರಿ, ಗೋಪಾಲ ಸುವರ್ಣ, ಜಿನೇಂದ್ರ ಜೈನ್, ಗುರುದತ್, ಮಚ್ಚೇಂದ್ರ ಸಾಲಿಯಾನ್ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.