ಅಸಂಘಟಿತ ಕ್ಷೇತ್ರಗಳ ಕಾರ್ಮಿಕರು ಸುಶಿಕ್ಷಿತರಾದರೆ ಸಾಮಾಜಿಕ, ಆರ್ಥಿಕ ಸ್ವಾವಲಂಬಿಗಳಾಗಲು ಸಾಧ್ಯ ಎಂದು ಕಾರ್ಮಿಕ ಶಿಕ್ಷಣಾಧಿಕಾರಿ ಸತೀಶ್ ಕುಮಾರ್ ಅವರು ಹೇಳಿದರು.
ಭಾರತ ಸರಕಾರದ ದತ್ತೋಪಂತ್ ಥೇಂಗಡಿ ಯೋಜನೆಯಡಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ ವತಿಯಿಂದ ಸಂಗಬೆಟ್ಟು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಅಸಂಘಟಿತ ಕಾರ್ಮಿಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸತೀಶ್ ಶುಭ ಹಾರೈಸಿದರು. ಗ್ರಾ.ಪಂ. ಸಹಾಯಕ ಲೆಕ್ಕ ಅಧಿಕಾರಿ ಪುಟ್ಟ ಸ್ವಾಮಿ ಕೆ. ಸ್ವಾಗತಿಸಿ, ಸಿಬ್ಬಂದಿ ಮಹಾಬಲ ವಂದಿಸಿದರು.
ತರಬೇತಿದಾರ ಮಂಜು ವಿಟ್ಲ ಕಾರ್ಯ ಕ್ರಮ ನಿರೂಪಿಸಿದರು. ಬಳಿಕ ಮಾಹಿತಿ ಕಾರ್ಯಾಗಾರ, ಸಂವಾದ ನಡೆಯಿತು.