ಬಿ.ಸಿ.ರೋಡ್ ಶಾಖಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಬ್ಯಾಂಕ್ ಉಳಿತಾಯ ಖಾತೆಗೆ ಆಧಾರ್, ಮೊಬೈಲ್ ಸಂಖ್ಯೆ ಜೋಡಣೆ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಾಹನ ಜಾಥಾ ನಡೆಸಿದ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ನಗರ ಹಾಗೂ ಗ್ರಾಮಾಂತರ ಪ್ರದೇಶಗಳನ್ನು ಅಭಿಯಾನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಬಂಟ್ವಾಳ, ಮೆಲ್ಕಾರ್, ಮಾಣಿ, ಗೋಳ್ತಮಜಲು, ಕಲ್ಲಡ್ಕ, ಮುಡಿಪು, ತುಂಬೆ, ಪುದು, ಪರಂಗಿಪೇಟೆ, ಮೇರಮಜಲು ಮತ್ತಿತರ ಕಡೆಗಳಲ್ಲಿ ಪ್ರಚಾರಾಂದೋಲನ ನಡೆಸಲಾಯಿತು. ಗ್ರಾಹಕರಿಗೆ ಮಾಹಿತಿ ಪತ್ರ ವಿತರಿಸಿ, ಸಲಹೆ-ಸೂಚನೆ ನೀಡಿದರು. ಶಾಖಾ ವ್ಯವಸ್ಥಾಪಕ ಅತುಲ್ ಕರ್ಕೆರೆ, ಸಹಾಯಕ ವ್ಯವಸ್ಥಾಪಕ ಬಸವರಾಜ್, ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…