ಗಾಂಜ ಸೇದುವಂತೆ ಒತ್ತಾಯಿಸಿದಾಗ ನಿರಾಕರಿಸಿದ್ದಕ್ಕೆ ಬುದ್ದಿಮಾಂದ್ಯ ವಿದ್ಯಾರ್ಥಿ ಸಹಿತ ದಲಿತ ವಿದ್ಯಾರ್ಥಿಗಳ ಮೇಲಿನ ಅಮಾನವೀಯ ಹಲ್ಲೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿಯು ತೀವ್ರವಾಗಿ ಖಂಡಿಸಿದೆ. ಮಾರಿಪಳ್ಳದ ಕುಮಡೇಲು ನಿವಾಸಿಗಳಾದ ಸುಮಂತ್(16) ಹಾಗೂ ಸುಶಾಂತ್(14) ಹಲ್ಲೆಗೊಳಗಾದ ವಿದ್ಯಾರ್ಥಿಗಳು. ಮಕ್ಕಳು ಕಲಿಯುವ ಪವಿತ್ರ ಸ್ಥಳವಾದ ಶಾಲೆಯ ಆವರಣದಲ್ಲೆ ಈ ನೀಚ ಕೃತ್ಯ ನಡೆದದ್ದು ವಿಪರ್ಯಾಸ, ಮಾರಿಪಳ್ಳದಲ್ಲಿ ಅನೇಕ ವಿದ್ಯಾರ್ಥಿಗಳು ಗಾಂಜ ಚಟಕ್ಕೆ ಬಲಿಯಾಗುತ್ತಿದ್ದು ಈಗ ವಿದ್ಯಾರ್ಥಿಗಳ ಮೇಲೆ ಗಾಂಜ ವ್ಯಸನಿಗಳ ಹಲ್ಲೆಯು ತೀವ್ರ ಆತಂಕಕಾರಿ ಘಟನೆಯಾಗಿದ್ದು ಮುಂದೆ ವಿದ್ಯಾರ್ಥಿಗಳ ಶ್ಯೆಕ್ಷಣಿಕ ಅಭಿವೃದ್ಧಿಗೆ ಘಟನೆಯು ಮಾರಕವಾಗಿದ್ದು ಕೂಡಲೇ ಪೋಲೀಸ್ ಇಲಾಖೆಯು ಮಧ್ಯ ಪ್ರವೇಶಿಸಿ ಇಲ್ಲಿನ ಗಾಂಜ ಮೂಲವನ್ನು ಪತ್ತೆ ಹಚ್ಚಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕ್ಯಾಂಪಸ್ ಫ್ರಂಟ್ ಇದರ ವಿರುದ್ಧ ಉಗ್ರ ಹೋರಾಟ ನಡೆಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.