ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿಣಿ ಸಭೆ ರಾಜ್ಯ ಸರಕಾರಿ ನೌಕರರ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಕೆ.ನೀಲೋಜಿರಾವ್ ಕಳೆದ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು.
ವಾರ್ಷಿಕ ಮಹಾಸಭೆಯ ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಮಂಡಿಸಿದರು. ಖರ್ಚು ವೆಚ್ಚಗಳಲ್ಲಿ ಉಳಿದ ಹಣವನ್ನು ಸಂಬಂಧಿಸಿದ ಸಹಕಾರಿ ಸಂಘದಲ್ಲಿ ಠೇವಣಿ ಇರಿಸುವುದು ಎಂದು ತೀರ್ಮಾನಿಸಲಾಯಿತು.
ಕೇಂದ್ರ ಸಂಘ, ಜಿಲ್ಲಾ ಸಂಘ ಮತ್ತು ಮಾಸಿಕ ಪತ್ರಿಕೆ ಕರ್ನಾಟಕ ಪೆನ್ಶನ್ಸ್ ಗಳ ವಾರ್ಷಿಕ ಚಂದಾಗಳನ್ನ ಪಾವತಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ತಾಲೂಕಿನಲ್ಲಿ ಸದಸ್ಯರಾಗದ ನಿವೃತ್ತರನ್ನು ಭೇಟಿ ಮಾಡಿ, ಸದಸ್ಯತ್ವ ನೋಂದಾವಣಿ ಮಾಡಿಕೊಳ್ಳಲು ಎಲ್ಲ ಸದಸ್ಯರನ್ನು ವಿನಂತಿಸಲಾಯಿತು. ಉಪಾಧ್ಯಕ್ಷರಾದ ಎ.ಲಿಂಗಪ್ಪ, ಕೆ.ಕೃಷ್ಣರಾಜ ಶೆಟ್ಟಿ, ಸದಸ್ಯರಾದ ಚಂದು ನಾಯ್ಕ, ಎಂ.ದಿನಕರ್, ರಾಘವನ್ ನಾಯರ್, ಲೋಕನಾಥಶೆಟ್ಟಿ, ಅಬ್ದುಲ್ ಸಲಾಮ್, ಎನ್.ಶಿವಶಂಕರ್, ಸುಂದರ ಮೂಲ್ಯ, ಬಿ.ಎಂ.ಕಮಲಾಕ್ಷ, ಪದ್ಮನಾಭ ರಾವ್, ಶಂಕರ ಪೂಜಾರಿ, ಶಾರದಾ ಎಸ್. ರಾವ್ ಹಾಜರಿದ್ದರು. ಎ.ಲಿಂಗಪ್ಪ ಸ್ವಾಗತಿಸಿದರು. ಎ.ದಾಮೋದರ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…