ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯಲ್ಲಿರುವ ಪ್ರಗತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಎಸ್.ಎಸ್.ಎಲ್.ಸಿ ಕಲಿಯುತ್ತಿರುವ ಶ್ರೇಯಾ 622 ಅಂಕ ಗಳಿಸಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾಳೆ.
ಪಣೋಲಿಬೈಲ್ ನಲ್ಲಿ ವ್ಯಾಪಾರ ನಡೆಸುತ್ತಿರುವ ಕೇಶವ ಮೂಲ್ಯ ಎಂಬವರ ಮಗಳು ಶ್ರೇಯಾ ಕನ್ನಡದಲ್ಲಿ 123, ಗಣಿತದಲ್ಲಿ 99 ಅಂಕ ಗಳಿಸಿದ್ದು ಉಳಿದ ಎಲ್ಲ ವಿಭಾಗಗಳಲ್ಲಿ ಶೇ.100 ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಕೇಶವ ಮೂಲ್ಯ ಮತ್ತು ಭಾರತಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲ ಮಗಳು ನಿನ್ನೆಯಷ್ಟೇ ಪಿಯುಸಿಯಲ್ಲಿ ಶೇ.94 ಅಂಕ ಗಳಿಸಿ ಖುಷಿ ತಂದರೆ, ಇಂದು ತಂಗಿ 622 ಅಂಕ ಗಳಿಸಿ ಡಬ್ಬಲ್ ಖುಷಿ ನೀಡಿದ್ದಾಳೆ. ಭಾಷಣ, ಚಿತ್ರಕಲೆ ಸ್ಪರ್ಧೆಗಳಲ್ಲಿ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿ ಗಳಿಸಿರುವ ಶ್ರೇಯಾಗೆ ಮುಂದೆ ಡಾಕ್ಟರ್ ಆಗುವಾಸೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…