ಅಕ್ಕ ಮರಿಯಾ ಅಲಾಮ್ ಎಂ.ಬಿ.ಬಿ.ಎಸ್. ಕಲಿಯುತ್ತಿದ್ದಾಳೆ. ಹೀಗಾಗಿ ನನಗೂ ಡಾಕ್ಟರ್ ಆಗುವಾಸೆ. ಹೀಗನ್ನುತ್ತಾಳೆ ಎಸ್.ಎಸ್.ಎಲ್.ಸಿಯಲ್ಲಿ 621 ಅಂಕ ಗಳಿಸಿದ ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಎಸ್. ವಿ.ಎಸ್.ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೈನಾ ಅಂಜುಮ್ ಕೆ.ಕೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ . ಕೆ ಶಾಹುಲ್ ಹಮೀದ್ ಮತ್ತು ಸಾರಾ ಮೆಹಝಾನ್ ದಂಪತಿಯ ದ್ವಿತೀಯ ಪುತ್ರಿ ಮೈನಾ, ತಂದೆ, ತಾಯಿಯ ಮುದ್ದಿನ ಮಗಳು.
ಕೇವಲ ಓದುವುರದಲ್ಲಷ್ಟೇ ಅಲ್ಲ, ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಪಡೆದಿರುವ ಈಕೆ ಪ್ರತಿಭಾ ಕಾರಂಜಿಯಲ್ಲಿ ದಕ ಜಿಲ್ಲೆಯನ್ನು ಪ್ರತಿನಿಸಿದ್ದಾಳೆ. ಸೃಜನಾತ್ಮಕ ಬರವಣಿಗೆ, ಕವನ, ಪ್ರಬಂಧ ರಚನೆಯಲ್ಲಿ ಈಕೆ ಎತ್ತಿದ ಕೈ. ನನ್ನ ಮೊದಲ ಮಗಳು ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದಾಳೆ. ಅವಳೂ ಶೇ.98 ಅಂಕಗಳನ್ನು ಎಸ್.ಎಸ್.ಎಲ್.ಸಿಯಲ್ಲಿ ಗಳಿಸಿದ್ದಳು.
ಎರಡನೇ ಮಗಳೂ 621 ಅಂಕ ಗಳಿಸಿದ್ದು ಖುಷಿಯಾಗಿದೆ ಎನ್ನುತ್ತಾರೆ ಶಾಹುಲ್ ಹಮೀದ್. ಮಗಳ ಡಾಕ್ಟರ್ ಆಗುವ ಆಸೆಗೆ ಬೆನ್ನೆಲುಬಾಗಿ ನಿಂತಿರುವ ಅವರ ಮಗ ಆಝಮ್ ಎಸ್.ವಿ.ಎಸ್.ನಲ್ಲಿ ಏಳನೇ ತರಗತಿ ವಿದ್ಯಾರ್ಥಿ. ಮೈನಾಗೆ ಕನ್ನಡ 100 ,ಇಂಗ್ಲೀಷ್ 100, ಹಿಂದಿ 100 , ಸಮಾಜ, 100, ಗಣಿತ 99, ವಿಜ್ಞಾನ 97 ಅಂಕಗಳು ದೊರಕಿವೆ.